×
Ad

ಜಾಮಿಯಾದಲ್ಲಿ ಗುಂಡು ಹಾರಿಸಿದವನಿಗೆ ಸಹಕರಿಸಿದ ಆರೋಪ: ಕುಸ್ತಿಪಟು ಬಂಧನ

Update: 2020-02-04 11:01 IST

ಹೊಸದಿಲ್ಲಿ,  ಫೆ.4: ಜಾಮಿಯಾ ವಿವಿ  ಹೊರಗೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಆರೋಪಿಗೆ ಪಿಸ್ತೂಲ್ ಖರೀದಿಸಲು ಸಹಾಯ ಮಾಡಿದ ಆರೋಪದಲ್ಲಿ ದಿಲ್ಲಿ ಪೊಲೀಸರು ಸೋಮವಾರ ಕುಸ್ತಿಪಟು ಒಬ್ಬರನ್ನು ಬಂಧಿಸಿದ್ದಾರೆ .

ಆರೋಪಿಗೆ ಸಹಕರಿಸಿದ ಕುಸ್ತಿಪಟು ಅಜೀತ್ (25) ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಸಹಜಪುರ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡು ಹಾರಿಸಿದ ಆರೋಪಿ ರಾಮ್ ಭಗತ್ ಗೋಪಾಲ್ ಶರ್ಮಾನ ಸಂಬಂಧಿಯಾಗಿರುವ ಅಜೀತ್ ಕಲಾ ಪದವೀಧರರಾಗಿದ್ದು, ಪ್ರಸ್ತುತ ಯುಪಿ ವಿಶ್ವವಿದ್ಯಾಲಯದಿಂದ ತಮ್ಮ ಬಿಇಡಿ  ವ್ಯಾಸಂಗ ಮಾಡುತ್ತಿದ್ದಾನೆ. 32 ಕೆಜಿ ವಿಭಾಗದಲ್ಲಿ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್ ಗೆದ್ದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದಾರೆ.

ಜಾಮಿಯಾದಲ್ಲಿ ಗುಂಡು ಹಾರಿಸಿದ ಆರೋಪಿಗೆ ದೇಶಿಯ ನಿರ್ಮಿತ ಪಿಸ್ತೂಲ್ ಖರೀದಿಸಲು 10,000 ರೂ. ನೀಡಿರುವುದಾಗಿ  ಅಜಿತ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News