ಎನ್‌ಪಿಆರ್ ವೇಳೆ ಯಾವುದೇ ದಾಖಲೆ ಪಡೆಯುವುದಿಲ್ಲ:ಕೇಂದ್ರ ಸರಕಾರ

Update: 2020-02-04 14:07 GMT

ಹೊಸದಿಲ್ಲಿ,ಫೆ.4: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ದಾಖಲೆಯನ್ನು ಸಂಗ್ರಹಿಸುವುದಿಲ್ಲ ಮತ್ತು ಆಧಾರ್ ಸಂಖ್ಯೆಯನ್ನು ಒದಗಿಸುವುದು ಕೇವಲ ಸ್ವಯಂಪ್ರೇರಿತವಾಗಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಸ್ಪಷ್ಟಪಡಿಸಿದೆ.

ಎನ್‌ಪಿಆರ್ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಕಳವಳಗಳನ್ನು ವ್ಯಕ್ತಪಡಿಸಿರುವ ರಾಜ್ಯಗಳೊಂದಿಗೆ ಸರಕಾರವು ಚರ್ಚಿಸುತ್ತಿದೆ ಎಂದು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ತಿಳಿಸಿದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಎನ್‌ಪಿಆರ್‌ಗಾಗಿ ಜನರು ತಮಗೆ ಗೊತ್ತಿರುವ ಮಾಹಿತಿಗಳನ್ನು ಒದಗಿಸಬೇಕು ಮತ್ತು ಅವರಿಂದ ಯಾವುದೇ ದಾಖಲೆಯನ್ನು ಸಂಗ್ರಹಿಸಲಾಗುವುದಿಲ್ಲ ಎಂದರು.

ಎನ್‌ಪಿಆರ್ ಪರಿಷ್ಕರಣೆ ಸಂದರ್ಭದಲ್ಲಿ ಶಂಕಾತ್ಮಕ ಪೌರತ್ವವನ್ನು ಹೊಂದಿರುವವರನ್ನು ಪತ್ತೆ ಹಚ್ಚಲು ಯಾವುದೇ ದೃಢೀಕರಣ ಪ್ರಕ್ರಿಯೆಯನ್ನು ನಡೆಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ದೇಶಾದ್ಯಂತ 2020 ಎ.1ರಿಂದ ಸೆ.30ರವರೆಗೆ ನಡೆಯಲಿರುವ ಜನಗಣತಿಯ ಮನೆ ಪಟ್ಟಿ ಮಾಡುವಿಕೆ ಹಂತದೊಂದಿಗೆ ಎನ್‌ಪಿಆರ್ ಪ್ರಕ್ರಿಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News