ಹಾಂಕಾಂಗ್‌ನಲ್ಲಿ ಮೊದಲ ಕೊರೋನವೈರಸ್ ಸಾವು: ಚೀನಾದ ಹೊರಗಡೆ ಇದು 2ನೇ ಸಾವು

Update: 2020-02-04 15:23 GMT
file photo

ಹಾಂಕಾಂಗ್, ಫೆ. 4: ಹಾಂಕಾಂಗ್‌ನಲ್ಲಿ ಮೊದಲ ಕೊರೋನವೈರಸ್ ಸಾವು ಮಂಗಳವಾರ ಸಂಭವಿಸಿದೆ. ಜನವರಿಯಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿದ್ದ 39 ವರ್ಷದ ಪುರುಷರೊಬ್ಬರು ಮೃತರಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಇದು ಚೀನಾದ ಹೊರಗೆ ಸಂಭವಿಸಿದ ಎರಡನೇ ಕೊರೋನವೈರಸ್ ಸಾವಾಗಿದೆ. ಚೀನಾದ ಹೊರಗಿನ ಮೊದಲ ಕೊರೋನವೈರಸ್ ಸಾವು ಫಿಲಿಪ್ಪೀನ್ಸ್‌ನಿಂದ ರವಿವಾರ ವರದಿಯಾಗಿತ್ತು. ವುಹಾನ್‌ನಿಂದ ಅಲ್ಲಿಗೆ ಬಂದಿದ್ದ 44 ವರ್ಷದ ಚೀನಾ ಪ್ರಜೆಯೊಬ್ಬರು ರೋಗಕ್ಕೆ ಬಲಿಯಾಗಿದ್ದರು.

ಅಮೆರಿಕ, ಜಪಾನ್, ಥಾಯ್ಲೆಂಡ್, ಹಾಂಕಾಂಗ್ ಮತ್ತು ಬ್ರಿಟನ್ ಸೇರಿದಂತೆ 23 ಇತರ ದೇಶಗಳು ಮತ್ತು ಪ್ರದೇಶಗಳಲ್ಲಿ ಕನಿಷ್ಠ 151 ಸೋಂಕು ಪ್ರಕರಣಗಳು ದಾಖಲಾಗಿವೆ.

ಮಾತೃದೇಶ ಚೀನಾದೊಂದಿಗಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಹಾಂಕಾಂಗ್ ಸರಕಾರವನ್ನು ಒತ್ತಾಯಿಸಿ ಸೋಮವಾರ ನೂರಾರು ವೈದ್ಯಕೀಯ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು. ಅವರು ಎರಡನೇ ದಿನದ ಮುಷ್ಕರವನ್ನು ಆರಂಭಿಸುತ್ತಿದ್ದಂತೆಯೇ ಈ ಸಾವನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News