ಗಿರ್ ಅರಣ್ಯದಲ್ಲಿ ಮಗುವನ್ನು ಕಚ್ಚಿತಿಂದ ಸಿಂಹ

Update: 2020-02-04 16:51 GMT
ಫೈಲ್ ಚಿತ್ರ

ಗಾಂಧೀನಗರ, ಫೆ.4: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ 5 ವರ್ಷದ ಮಗುವನ್ನು ಸಿಂಹವೊಂದು ಕೊಂದು ಹಾಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 ಗಿರ್ ಅರಣ್ಯದ ಬಳಿಯಿರುವ ಉಚೈಯ ಮತ್ತು ಭಚಾದರ್ ಗ್ರಾಮಗಳ ಮಧ್ಯೆ ಈ ದುರ್ಘಟನೆ ನಡೆದಿದೆ. ಈ ಗ್ರಾಮಗಳಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬ ಅರಣ್ಯದ ಬಳಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ. ಸೋಮವಾರ ರಾತ್ರಿ ವೇಳೆ ತನ್ನ ಮರಿಗಳೊಂದಿಗೆ ಗುಡಿಸಲಿಗೆ ನುಗ್ಗಿದ ಹೆಣ್ಣು ಸಿಂಹ ಅಲ್ಲಿ ಮಲಗಿದ್ದ 5 ವರ್ಷದ ಮಗುವನ್ನು ಕಚ್ಚಿಕೊಂಡು ಅರಣ್ಯದೊಳಗೆ ಓಡಿ ಹೋಗಿದೆ. ಮನೆಯವರು ಹಾಗೂ ನೆರೆಹೊರೆಯವರು ಮಗುವನ್ನು ಹುಡುಕುತ್ತಾ ಕಾಡಿಗೆ ಹೋದಾಗ ಅಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು ಅರ್ಧ ಭಾಗವನ್ನು ಸಿಂಹ ತಿಂದು ಹಾಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೀಗ ಸಿಂಹವನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದಾರೆ. ಕಳೆದ ಡಿಸೆಂಬರ್ 23ರಂದು ಗಿರ್ ಅರಣ್ಯದ ಬಳಿಯ ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬನನ್ನು ಸಿಂಹವೊಂದು ಕೊಂದು ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News