ಮರಣದಂಡನೆ ತೀರ್ಪು ಅನುಷ್ಠಾನಿಸಿ: ಸ್ಪಷ್ಟ ಸಂದೇಶ ನೀಡಿದ ರಾಜ್ಯ ಸಭೆ
Update: 2020-02-04 22:40 IST
ಹೊಸದಿಲ್ಲಿ, ಫೆ. 4: ದಿಲ್ಲಿ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಶೀಘ್ರ ಮರಣದಂಡನೆ ವಿಧಿಸುವಂತೆ ಆಪ್ ಶಾಸಕ ಸಂಜಯ್ ಸಿಂಗ್ ನೀಡಿರುವ ಕರೆಗೆ ರಾಜ್ಯ ಸಭೆ ಸದಸ್ಯ ಎಂ. ವೆಂಕಯ್ಯ ನಾಯ್ಡು ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾಗಿಯಾಗಿರುವ ಎಲ್ಲ ಸಂಸ್ಥೆಗಳು ತಮ್ಮ ಜವಾಬ್ದಾರಿ ನೆರವೇರಿಸಬೇಕು ಹಾಗೂ ತೀರ್ಪನ್ನು ಶೀಘ್ರದಲ್ಲಿ ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ದೇಶದಲ್ಲಿ ಈ ರೀತಿಯ ವಿಷಯಗಳನ್ನು ಮುಂದುವರಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಆರೋಪಿಗಳಿಗೆ ಲಭ್ಯವಿರುವ ಕಾನೂನು ಅವಕಾಶಗಳನ್ನು ನೀಡಲಾಗಿತ್ತು. ಅದೆಲ್ಲವೂ ಈಗ ಪೂರ್ಣಗೊಂಡಿದೆ. ಈಗ ನ್ಯಾಯಾಲಯ ನಿರ್ಧರಿಸಿದ ಶಿಕ್ಷೆಯನ್ನು ಅನುಷ್ಠಾನಗೊಳಿಸಲು ಅವರು ವಿಳಂಬಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
-----------------------------------------------------