'ಕುಂದಾಪುರದ ವ್ಯಕ್ತಿಯ ಬಂಧನ: ಮನವಿಗೆ ಪ್ರತಿಸ್ಪಂದಿಸದ ಸೌದಿ ಆಡಳಿತ'

Update: 2020-02-04 17:37 GMT

ಬೆಂಗಳೂರು, ಫೆ. 4: ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪೋಸ್ಟ್ ಹಾಕಿದ ಆರೋಪದಲ್ಲಿ ಹರೀಶ್ ಬಂಗೇರ (32) ಬಂಧನವಾದ ಒಂದು ತಿಂಗಳ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು, ನಾವು ಗಲ್ಫ್ ರಾಷ್ಟ್ರದಲ್ಲಿರುವ ಅಧಿಕಾರಿಗಳಿಗೆ ಹಲವು ಮನವಿ ಗಳನ್ನು ರವಾನಿಸಿದ್ದೇವೆ. ಆದರೆ, ಅವರು ಒಂದು ಮನವಿಗೆ ಕೂಡ ಉತ್ತರಿಸಿಲ್ಲ ಎಂದು ಹೇಳಿದ್ದಾರೆ.

ಕುಂದಾಪುರ ತಾಲೂಕಿನ ಬೀಜಾಡಿಯ ಗೋಯಡಿಬೆಟ್ಟು ನಿವಾಸಿಯಾಗಿರುವ ಹರೀಶ್ ಬಂಗೇರ ಸೌದಿ ಅರೇಬಿಯಾ ಪೂರ್ವ ಪ್ರಾಂತ್ಯದ ರಾಜಧಾನಿಯಾಗಿರುವ ದಮಾಮ್‌ನಲ್ಲಿ ಏರ್ ಕಂಡಿಷನ್ ಟೆಕ್ನೀಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

 ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಫೇಸ್‌ಬುಕ್‌ನಲ್ಲಿ ಮಾನ ಹಾನಿಕರ ಸಂದೇಶ ಹಾಕಿದ ಆರೋಪದಲ್ಲಿ 2019 ಡಿಸೆಂಬರ್ 20ರಂದು ಹರೀಶ್ ಬಂಗೇರ ಬಂಧಿಸಲಾಗಿತ್ತು.

‘‘ಸೌದಿ ಅಧಿಕಾರಿಗಳನ್ನು ಸಂಪರ್ಕಿಸಲು ನಾವು ಹಲವು ಬಾರಿ ಪ್ರಯತ್ನಿಸಿದ್ದೇವೆ. ಆದರೆ, ಅವರು ಪ್ರತಿಕ್ರಿಯೆ ನೀಡಿಲ್ಲ. ಸಮಾಲೋಚಕರೊಂದಿಗೆ ಕನಿಷ್ಠ ಸಂವಹನ ನಡೆಸುವುದು ಪ್ರತಿ ವ್ಯಕ್ತಿಯ ಹಕ್ಕು. ಆದರೆ, ಸೌದಿ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿ ಯಾವುದೇ ಮಾಹಿತಿ ನೀಡುತ್ತಿಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಉಡುಪಿ  ಹರೀಶ್ ಬಂಗೇರ ಅವರ ಪತ್ನಿ ಸುಮನಾ ಎಂ., ಫೇಸ್ ಖಾತೆ ಸಮಸ್ಯೆ ಸೃಷ್ಟಿಸಿತು. ಇದಕ್ಕೆ ಸಂಬಂಧಿಸಿ ಅಮೆರಿಕ ಮೂಲದ ಕಂಪೆನಿಯನ್ನು ನಾವು ಸಂಪರ್ಕಿಸಿದ್ದೇವೆ. ಆದರೆ, ಇದುವರೆಗೆ ಪ್ರತಿಕ್ರಿಯೆ ದೊರಕಿಲ್ಲ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News