ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ 4 ವಿಟಿಯು ರ್ಯಾಂಕ್

Update: 2020-02-05 10:12 GMT

ಮಂಗಳೂರು, ಫೆ. 5: ನಗರದ ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆ ಕೆಂಜಾರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 2018-19ನೇ ಸಾಲಿನಲ್ಲಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ನಾಲ್ಕು ರ್ಯಾಂಕ್ ತನ್ನದಾಗಿಸಿದೆ ಎಂದು ಸಂಸ್ಥಯ ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಂಬಿಎ ವಿಭಾಗದಲ್ಲಿ ಅಶ್ವಿನಿ ದ್ವಿತೀಯ ರ್ಯಾಂಕ್, ಪ್ರತಿಮಾ ಎಸ್. ಹತ್ತನೇ ರ್ಯಾಂಕ್ ಹಾಗೂ ಎಂಸಿಎ (ಮಾಸ್ಟರ್‌ಆಫ್ ಕಂಪ್ಯೂಟರ್ ಅಪ್ಲಿಕೇಶನ್) ವಿಭಾಗದಲ್ಲಿ ಮೇಘಲಾ ಆರನೇ ರ್ಯಾಂಕ್ ಹಾಗೂ ಎಂ.ಟೆಕ್ (ಕನ್‌ಸ್ಟ್ರಕ್ಷನ್ ಟೆಕ್ನಾಲಜಿ) ವಿಭಾಗದಲ್ಲಿ ಸೋಹನ್ ಶೆಟ್ಟಿ ಒಂಬತ್ತನೇ ರ್ಯಾಂಕ್‌ನ್ನು ಪಡೆದುಕೊಂಡಿರುತ್ತಾರೆ ಎಂದವರು ಹೇಳಿದರು.

ಸಂಸ್ಥೆ 2019ರ ಜೂನ್‌ನಲ್ಲಿ ನಡೆದ ವಿಟಿಯು ಪರೀಕ್ಷೆಯಲ್ಲಿ ಬಿಇ 8ನೇ ಸೆಮಿಸ್ಟರ್‌ನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.100, ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.100, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.100, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.100, ಇನ್ಫಾರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.95 ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.95, ಫಲಿತಾಂಶ ದಾಖಲಿಸಿದೆ ಎಂದು ಅವರು ವಿವರಿಸಿದರು.

ಸಂಸ್ಥೆಯ ನಿರ್ದೇಶಕ ಡಾ.ಪ್ರಕಾಶ್, ಎಂಬಿಎ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟೇಶ್ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News