ಮೊಬೈಲ್ ಅಂಗಡಿಗೆ ನುಗ್ಗಿ 3 ಲಕ್ಷ ರೂ. ಮೌಲ್ಯದ ಸೊತ್ತು ಕಳವು

Update: 2020-02-06 17:09 GMT

ಬೈಂದೂರು, ಫೆ.6: ಉಪ್ಪುಂದದ ಅಂಬಾಗಿಲು ಬಳಿ ಇರುವ ಮೊಬೈಲ್ ಅಂಗಡಿಗೆ ಜ. 5ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ನಾವುಂದ ಎಂಜೆಎಂ ಮಸೀದಿ ಹತ್ತಿರ ನಿವಾಸಿ ಮಹಮ್ಮದ್ ಮುಸ್ತಾಕ್ ಎಂಬವರ ಮೊಬೈಲ್ ಕೇರ್ ಎಂಬ ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು, 7 ಹೊಸ ಮೊಬೈಲ್, ಮೊಬೈಲ್‌ಗೆ ಹಾಕುವ ಗ್ಲಾಸ್ ಗಾರ್ಡ್, ಮೊಬೈಲ್ ಚಾರ್ಜರ್, ಮೆಮೋರಿ ಕಾರ್ಡ್, ಪೆನ್‌ಡ್ರೈವ್, ಸರ್ವಿಸ್‌ಗಾಗಿ ಬೇರೆ ಬೇರೆ ಮೊಬೈಲ್ ಶಾಪ್‌ಗಳಿಂದ ಬಂದ ಮೊಬೈಲ್‌ಗಳು, ಹೆಡ್‌ಪೋನ್, ಸೆಲ್ಫಿ ಸ್ಟಿಕ್, ಡಾಟಾ ಕೇಬಲ್, ಅಡಾಪ್ಟರ್ ಮತ್ತು ಮೊಬೈಲ್ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮರಾದ ಟಿವಿ ಹಾಗೂ ಡಿ.ವಿ.ಆರ್ ಮತ್ತು ಅಂಗಡಿಯ ಕ್ಯಾಶ್ ಡ್ರವರ್‌ನಲ್ಲಿದ್ದ 16,000 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News