ಭಾರತದ ಪುರುಷರ ಬಾಸ್ಕೆಟ್‌ಬಾಲ್ ತರಬೇತಿ ಶಿಬಿರಕ್ಕೆ ಮಂಗಳೂರಿನ ಸೌಕೀನ್ ಶೆಟ್ಟಿ ಆಯ್ಕೆ
Update: 2020-02-07 17:32 IST
ಮಂಗಳೂರು, ಫೆ. 7: ಟೋಕಿಯೋ ಒಲಿಂಪಿಕ್ಸ್‌ಗಾಗಿ ಬೆಂಗಳೂರಿನಲ್ಲಿ ಮಾ.18ರಿಂದ 22ರವರೆಗೆ ನಡೆಯಲಿರುವ 3 x3 ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಭಾರತ ಪುರುಷರ ಬಾಸ್ಕೆಟ್‌ಬಾಲ್ ತಂಡದಲ್ಲಿ ಮಂಗಳೂರು ಬಾಸ್ಕೆಟ್‌ಬಾಲ್ ಕ್ಲಬ್‌ನ ಸದಸ್ಯ ಸೌಕೀನ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಜಪಾನ್‌ನ ಟೋಕಿಯೋದಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್-2020ನಲ್ಲಿ ಮೊದಲ ಬಾರಿಗೆ 3x3 ಬಾಸ್ಕೆಟ್‌ಬಾಲ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ.
ಭಾರತದ ಪುರುಷರ ಬಾಸ್ಕೆಟ್‌ಬಾಲ್ ತಂಡದ ಆಯ್ಕೆಗೆ ತರಬೇತಿ ಶಿಬಿರ ಬೆಂಗಳೂರಿನ ವಿದ್ಯಾನಗರದಲ್ಲಿರುವ ಬಾಸ್ಕೆಟ್‌ಬಾಲ್ ಅಕಾಡೆಮಿಯಲ್ಲಿ ಫೆ.8ರಿಂದ ಮಾ.16ರವರೆಗೆ ನಡೆಯಲಿದ್ದು, ಇಲ್ಲಿ ಭಾರತ ತಂಡದ ಆಯ್ಕೆ ಮಾಡಲಾಗುವುದು.
ಸೌಕೀನ್ ಶೆಟ್ಟಿ ಅವರು ಮಂಗಳೂರು ಬಾಸ್ಕೆಟ್‌ಬಾಲ್ ಕ್ಲಬ್‌ನ ತರಬೇತುದಾರ ಆದಿತ್ಯ ಮಹಾಲೆ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.