×
Ad

ಯೋಧರಿಗೆ ಶುಭಾಶಯ ಪತ್ರ ರಚಿಸದ ಐಆರ್‌ಎಸ್ ಅಧಿಕಾರಿಗಳಿಗೆ ನೋಟಿಸ್

Update: 2020-02-07 22:09 IST

ಹೊಸದಿಲ್ಲಿ, ಫೆ.7: ಗಣರಾಜ್ಯೋತ್ಸವ ಸಂದರ್ಭದಲ್ಲಿ ಸೈನಿಕರಿಗೆ ಶುಭಾಶಯ ಪತ್ರಗಳನ್ನು ತಮ್ಮ ಕೈಗಳಿಂದಲೇ ತಯಾರಿಸಲು ವಿಫಲರಾದುದಕ್ಕಾಗಿ ಭಾರತೀಯ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳಿಗೆ, ನಾಗಪುರದಲ್ಲಿರುವ ರಾಷ್ಟ್ರೀಯ ತರಬೇತಿ ಅಕಾಡಮಿಯು ನೋಟಿಸ್ ನೀಡಿದೆಯೆಂದು, Theprint.in ಶುಕ್ರವಾರ ವರದಿ ಮಾಡಿದೆ.

ಐಆರ್‌ಎಸ್‌ನ 72ನೇ ಬ್ಯಾಚ್‌ನ 150 ಮಂದಿ ತರಬೇತಿ ನಿರತರ ಪೈಕಿ 80 ಮಂದಿ ಮಾತ್ರ ತಮಗೆ ವಹಿಸಿದ್ದ ಈ ಹೊಣೆಗಾರಿಕೆಯನ್ನು, ಜನವರಿ 15ರ ಅಂತಿಮಗಡುವಿನೊಳಗೆ ಸಲ್ಲಿಸಿದ್ದರು. ಶುಭಾಶಯ ಪತ್ರಗಳನ್ನು ಸಲ್ಲಿಸ ಉಳಿದ ತರಬೇತಿ ನಿರತ ಐಆರ್‌ಎಸ್ ಅಧಿಕಾರಿಗಳು, ಸೈನಿಕರ ಬಗ್ಗೆ ತೀವ್ರ ನಿಲಕ್ಷ್ಯದಿದ ವರ್ತಿಸಿದ್ದಾರೆ ಹಾಗೂ ಅಗೌರವ ಪ್ರದರ್ಶಿಸಿದ್ದಾರೆ ಎಂದು ಅಕಾಡಮಿ ಆಪಾದಿಸಿದದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರನ್ನು ಕೇಳಿಕೊಂಡಿದೆ.

     ಸೈನಿಕರಿಗೆ ಕಳುಹಿಸಬೇಕಾಗಿದ್ದ ಶುಭಾಶಯ ಪತ್ರಗಳನ್ನು ಸಲ್ಲಿಸದಿರುವುದಕ್ಕಾಗಿ ಜನವರಿ 30ರೊಳಗೆ ಉತ್ತರಿಸುವಂತೆ ಅವರಿಗೆ ನೇರ ತೆರಿಗೆಗಳ ರಾಷ್ಟ್ರೀಯ ಅಕಾಡಮಿಯ ಹೆಚ್ಚುವರಿ ಮಹಾ ನಿರ್ದೇಶಕ ನೌಶೀನ್ ಅನ್ಸಾರಿ ಆದೇಶ ನೀಡಿದ್ದಾರೆಂದು ವರದಿಯು ತಿಳಿಸಿದೆ. ಮಹಾಪ್ರಾಂಶುಪಾಲ ಅಲ್ಕಾ ತ್ಯಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆಂದು ಅಕಾಡಮಿಯ ಬೋಧಕವರ್ಗಕ್ಕೆ ಕಳುಹಿಸಿರುವ ಆದೇಶದ ಪ್ರತಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News