ಕಾಜೂರು ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

Update: 2020-02-07 17:12 GMT

ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‍ ಉರೂಸ್ ಸಂಭ್ರಮಕ್ಕೆ ಶುಕ್ರವಾರ ಚಾಲನೆ ದೊರೆತಿದೆ.

ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸುತ್ತಿದ್ದಾರೆ.

ಇಂದು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್  ದರ್ಗಾಕ್ಕೆ ಭೇಟಿ ನೀಡಿ ಉರೂಸ್ ಧ್ವಜವನ್ನು ಸಯ್ಯಿದ್ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ  ಕೆ. ಮುಹಮ್ಮದ್ ಕಿಲ್ಲೂರು, ಮತ್ತು ಕಾಜೂರು ತಂಙಳ್ ಅವರಿಗೆ ಹಸ್ತಾಂತಿಸಿದರು. ಇದಕ್ಕೂ ಮುನ್ನ ಕೂರತ್ ತಂಙಳ್ ನೇತ್ರತ್ವದಲ್ಲಿ ಅವುಲಿಯಾಗಳ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಉರೂಸ್ ಉದ್ಘಾಟನೆಯ ಅಧ್ಯಕ್ಷತೆಯನ್ನು ಸಯ್ಯಿದ್ ತಾಜುಲ್ ಉಲಮಾರ ಪುತ್ರ, ಸಯ್ಯದ್ ಹಾಮೀದ್ ಇಂಬಿಚ್ಚಿಕೋಯ ತಂಞಳ್ ಅಲ್ ಬುಖಾರಿ ಮದನಿ  ಕೊಯಿಲಾಂಡಿ ಕೇರಳ ವಹಿಸಿದ್ದರು .

ಈ ಸಂದರ್ಭ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ, ಉರೂಸ್ ಕಾರ್ಯದರ್ಶಿಗಳಾದ ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಮತ್ತು ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್ ಕಮಾಲ್, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಶೇಕ್ ಬಾವಾ ಹಾಜಿ, ಪ್ರಮುಖರಾದ ಎಸ್.ಎಂ ಕೋಯ ತಂಙಳ್, ಮುಹಮ್ಮದ್ ರಫಿ, ಸಾದಿಕ್ ಮಾಸ್ಟರ್, ಆಲಿಕುಂಞಿ ಸಖಾಫಿ, ಎಸ್ ಡಿ ಪಿ ಐ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಹಾಜಿ ಅಬ್ದುಲ್  ಅಝೀಝ್ ಮಾಗುಂಡಿ, ಎಎಆರ್ ಕರಾವಳಿ ಹಾಜಿ ಚಿಕ್ಕಮಗಳೂರು, ಮುತ್ತಲಿಬ್ ಮೂಡಬಿದ್ರೆ, ಆದಂ ಟಿ ಹೆಚ್, ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ರಹಮಾನ್ ಮುಸ್ಲಿಯಾರ್, ರಶೀದ್ ಮದನಿ, ನವಾಝ್ ಕಾರ್ಯಕ್ರಮ ನಿರೂಪಿಸಿದರು. ಕೆ.ಯು ಇಬ್ರಾಹಿಂ ಸ್ವಾಗತಿಸಿದರು. ಜುಮಾ ನಮಾಝ್ ಬಳಿಕ ಧ್ವಜಾರೋಹಣ ನಡೆಯಿತು.

ಸಂದಲ್ ಮೆರವಣಿಗೆ:

ದರ್ಗಾದ ಸಂಪ್ರದಾಯದಂತೆ ಕಿಲ್ಲೂರು ಜಮಾಅತ್ ನಿಂದ ಹೊರಟ ಸಂದಲ್ ಮೆರವಣಿಗೆಯನ್ನು ಕಾಜೂರು ಜಮಾಅತರು ಎದುರುಗೊಂಡು ಸ್ವಾಗತಿಸಿದರು. ಅಬ್ದುಸ್ಸುಕೂರ್ ನೇತ್ರತ್ವದಲ್ಲಿ ದರ್ಗಾಕ್ಕೆ ಚಾದರ ಅರ್ಪಿಸಲಾಯಿತು. ತಾಲೂಕು ಆಡಳಿತದ ಕಡೆಯಿಂದ ಗಣಪತಿ ಶಾಸ್ತ್ರಿ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News