ದಿಲ್ಲಿ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟ: ಈ ಬಾರಿ ಮತದಾರ 'ಜೈಕಾರ' ಹಾಕಿದ್ದು ಯಾರಿಗೆ ಗೊತ್ತಾ?
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಕೊನೆಗೊಂಡಿದ್ದು, ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಎಲ್ಲಾ ಸಮೀಕ್ಷೆಗಳು ದಿಲ್ಲಿಯಲ್ಲಿ ಮತ್ತೊಮ್ಮೆ ಆಪ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ.
70 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಬಿಜೆಪಿ 20 ಸ್ಥಾನಗಳು ಗೆಲ್ಲಬಹುದು ಎಂದು ಸಮೀಕ್ಷೆಗಳು ತಿಳಿಸಿವೆ.
ದಿಲ್ಲಿಯಲ್ಲಿ ಒಟ್ಟು ಸ್ಥಾನಗಳು 70: ಬಹುಮತಕ್ಕೆ ಬೇಕಾದ ಸಂಖ್ಯೆ: 36
ಟಿವಿ9 ಭಾರತ್ ವರ್ಷ್: 54 ಕ್ಷೇತ್ರಗಳಲ್ಲಿ ಆಪ್ , 15 ಸೀಟುಗಳಲ್ಲಿ ಬಿಜೆಪಿ ಜಯ ಗಳಿಸಲಿದೆ
ರಿಪಬ್ಲಿಕ್ ಟಿವಿ: ಆಪ್ 48ರಿಂದ 61, ಬಿಜೆಪಿ 9ರಿಂದ 21
ಟೈಮ್ಸ್ ನೌ: ಆಪ್ 44, ಬಿಜೆಪಿ 26
ಇಂಡಿಯಾ ನ್ಯೂಸ್-ನೇತಾ: ಆಪ್ 53ರಿಂದ 57, ಬಿಜೆಪಿ 11ರಿಂದ 17, ಕಾಂಗ್ರೆಸ್ 0ರಿಂದ 2 ಕ್ಷೇತ್ರಗಳು
ನ್ಯೂಸ್ ಎಕ್ಸ್ -ನೇತಾ: ಆಪ್ 53ರಿಂದ 57, ಬಿಜೆಪಿ 11ರಿಂದ 17
ಇಂಡಿಯಾ ಟುಡೆ ಆ್ಯಕ್ಸಿಸ್ ಪೋಲ್: ಪಶ್ಚಿಮ ದಿಲ್ಲಿಯಲ್ಲಿ ಆಪ್ ಗೆ 9ರಿಂದ 10, ಬಿಜೆಪಿಗೆ 0ದಿಂದ 1 ಸೀಟುಗಳು