×
Ad

ಇವಿಎಂ ಯಂತ್ರಗಳ ಕಾವಲಿಗೆ ಕಾರ್ಯಕರ್ತರನ್ನು ನಿಯೋಜಿಸಿದ ಕೇಜ್ರಿವಾಲ್

Update: 2020-02-09 13:52 IST

ಹೊಸದಿಲ್ಲಿ, ಫೆ.9: ಇವಿಎಂ ಯಂತ್ರಗಳನ್ನು ಇಡಲಾಗಿರುವ 30 ಸ್ಟ್ರಾಂಗ್ ರೂಮ್‌ಗಳ ಬಳಿ ನಮ್ಮ ಕಾರ್ಯಕರ್ತರನ್ನು ಕಾವಲು ಕಾಯಲು ನಿಯೋಜಿಸುವ ಕುರಿತು ನಿರ್ಧರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ಶನಿವಾರ ನಡೆದ ಸಭೆಯ ಬಳಿಕ ತಿಳಿಸಿದೆ.

ಮಂಗಳವಾರ ನಡೆಯಲಿರುವ ಮತ ಎಣಿಕೆಯ ತನಕ ಇವಿಎಂ ಯಂತ್ರಗಳ ಮೇಲೆ ನಿಗಾವಹಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಆಪ್ ತಿಳಿಸಿದೆ.

ಶನಿವಾರ ರಾತ್ರಿ ತನ್ನ ನಿವಾಸದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಜಯ ಸಿಂಗ್ ಹಾಗೂ ಮನೀಷ್ ಸಿಸೋಡಿಯಾ ಸಹಿತ ಪಕ್ಷದ ಹಿರಿಯ ನಾಯಕರ ಜೊತೆಗೆ ಸಭೆ ನಡೆಸಿದರು.

" ರಾಷ್ಟ್ರ ರಾಜಧಾನಿಯಲ್ಲಿ ಇವಿಎಂ ಯಂತ್ರಗಳನ್ನು ಇಡಲಾಗಿರುವ ಪ್ರದೇಶಗಳಲ್ಲಿ ನಮ್ಮ ಪಕ್ಷದ ಸ್ವಯಂಸೇವಕರನ್ನು ನಿಯೋಜಸಲು ನಿರ್ಧರಿಸಿದ್ದೇವೆ. ಇವಿಎಂ ಯಂತ್ರಗಳನ್ನು ಇಡಲು 30 ಸ್ಟ್ರಾಂಗ್ ರೂಮ್‌ಗಳನ್ನು ನಿರ್ಮಿಸಲಾಗಿದೆ. ಬಾರಾಪುರ್‌ನಲ್ಲಿ ಇವಿಎಂ ಯಂತ್ರದಲ್ಲಿ ಅಕ್ರಮ ನಡೆದಿರುವ ಕುರಿತು ನಮಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ'' ಎಂದು ರಾಜ್ಯಸಭಾ ಸಂಸದ ಸಂಜಯ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಶನಿವಾರ ಹೊರಬಂದಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ ಮುಖ್ಯಮಂತ್ರಿ ಕೇಜ್ರಿವಾಲ್ 2015ರ ಫಲಿತಾಂಶವನ್ನು ಪುನರಾವರ್ತಿಸಲಿದ್ದಾರೆ. 2015ರಲ್ಲಿ ಆಪ್ 70 ಸೀಟುಗಳ ಪೈಕಿ 67ರಲ್ಲಿ ಅಭೂತಪೂರ್ವ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News