×
Ad

ಸಿಎಎ ಪರ ರ್ಯಾಲಿಯಲ್ಲಿ ಭಾಗಿಯಾದವರಿಂದ ಕಾಲೇಜಿಗೆ ನುಗ್ಗಿ ಲೈಂಗಿಕ ಕಿರುಕುಳ: ವಿದ್ಯಾರ್ಥಿನಿಯರ ಆರೋಪ

Update: 2020-02-09 14:49 IST

ಹೊಸದಿಲ್ಲಿ: ಕಾಲೇಜು ವಾರ್ಷಿಕೋತ್ಸವದ ವೇಳೆ ಗುಂಪೊಂದು ಕಾಲೇಜು ಆವರಣಕ್ಕೆ ನುಗ್ಗಿ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದೆ ಎಂದು ದಿಲ್ಲಿಯ ಗಾರ್ಗಿ ಕಾಲೇಜಿನ ವಿದ್ಯಾರ್ಥಿನಿಯರು ಆಪಾದಿಸಿದ್ದಾರೆ.

ಹೊರಗಿನ ವ್ಯಕ್ತಿಗಳು ಕಾಲೇಜು ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ವಾಶ್‍ ರೂಂನೊಳಗೆ ಕೂಡಿಹಾಕಿ ಅಸಭ್ಯವಾಗಿ ವರ್ತಿಸಿದರು ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಮೂರು ದಿನಗಳ ಕಾಲೇಜಿನ ರಿವರೀ ಹಬ್ಬದ ವೇಳೆ ಈ ಘಟನೆ ನಡೆದಿದ್ದು, ಕಾಲೇಜು ಆವರಣಕ್ಕೆ ನುಗ್ಗಿ ಕಿರುಕುಳ ನೀಡಿದವರು ಸಿಎಎ ಪರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆಗ ಕಾಲೇಜು ಆವರಣಕ್ಕೆ ನುಗ್ಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಅವರು ಪಾನಪತ್ತರಾಗಿದ್ದರು; ಮಧ್ಯವಯಸ್ಕರು ನಮಗೆ ಲೈಂಗಿಕ ಕಿರುಕುಳ ನೀಡಿ, ನಮ್ಮೆದುರು ಹಸ್ತಮೈಥುನ ಮಡಿಕೊಂಡರು. ನನ್ನನ್ನು ಗುಂಪಿನ ವ್ಯಕ್ತಿಗಳು ಸುತ್ತುವರಿದಾಗ ನಾನು ಚೀರಾಡುತ್ತಿದೆ. ಆಗ ಅವರು ನಗುತ್ತಿದ್ದರು" ಎಂದು ವಿದ್ಯಾರ್ಥಿನಿಯೊಬ್ಬರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News