ಎನ್‌ಪಿಆರ್ ನಡೆಸದೇ ಇರಲು ಕಾನೂನು ಆಯ್ಕೆಗಾಗಿ ಚಿಂತನೆ: ಮಹಾರಾಷ್ಟ್ರ ಸರಕಾರ
ಪುಣೆ, ಫೆ.9:ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)ಯನ್ನು ನಡೆಸದೇ ಇರಲು ಕಾನೂನು ಆಯ್ಕೆಗಾಗಿ ಮಹಾ ವಿಕಾಸ್ ಅಘಾಡಿ ಸರಕಾರ ಅನ್ವೇಷಣೆ ನಡೆಸುತ್ತಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.
‘‘ಎನ್‌ಪಿಆರ್ ನ್ನು ಹೇಗೆ ಅನುಷ್ಠಾನಗೊಳಿಸಬಾರದು ಎನ್ನುವುದರ ಕುರಿತು ಕಾನೂನು ವಿಭಾಗದ ಸಲಹೆ ಪಡೆಯಲು ನಿರ್ಧರಿಸಿದ್ದೇವೆ’’ಎಂದು ಎನ್‌ಸಿಪಿ ಮುಖಂಡ ಹೇಳಿದ್ದಾರೆ.
ಎನ್‌ಪಿಆರ್‌ಅನುಷ್ಠಾನಕ್ಕೆ ತರುವುದಕ್ಕೆ ಸಂಬಂಧಿಸಿ 12ಕ್ಕೂ ಅಧಿಕ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅನಿಲ್ ದೇಶ್‌ಮುಖ್,‘‘ಪೌರತ್ವಕ್ಕಾಗಿ ರಾಜ್ಯದ ಯಾವ ನಾಗರಿಕನಿಗೆ ಕಿರುಕುಳ ನೀಡುವುದಿಲ್ಲ. ರಾಜ್ಯದಲ್ಲಿ ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಜಾರಿಗೊಳಿಸುವುದಿಲ್ಲ. ದಯವಿಟ್ಟು ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಿ ಎಂದು ನಾನು ವಿನಂತಿಕೊಳ್ಳುವೆ ಎಂದರು.
ಜನಗಣತಿ ವಿಭಾಗದ ಪ್ರಕಾರ ಮೇ-ಜೂನ್‌ನಲ್ಲಿ ಏಕಕಾಲದಲ್ಲಿ ಎನ್‌ಪಿಆರ್ ಅಭಿಯಾನ ಹಾಗೂ ಜನಗಣತಿ ಆರಂಭವಾಗಲಿದೆ.