ಕಾಡ್ಗಿಚ್ಚು, ಜಡಿಮಳೆ, ಬಿರುಗಾಳಿ, ದಿಢೀರ್ ಪ್ರವಾಹದಿಂದ ಆಸ್ಟ್ರೇಲಿಯ ಜರ್ಜರಿತ

Update: 2020-02-09 17:35 GMT
ಫೈಲ್ ಚಿತ್ರ

ಮೆಲ್ಬರ್ನ್ (ಆಸ್ಟ್ರೇಲಿಯ), ಫೆ. 9: ರವಿವಾರ ಪಶ್ಚಿಮ ಆಸ್ಟ್ರೇಲಿಯ ರಾಜ್ಯದ ಹಲವು ಭಾಗಗಳನ್ನು ತೀವ್ರ ಕಾಡ್ಗಿಚ್ಚು ಆವರಿಸಿದೆ ಹಾಗೂ ರಾಜ್ಯದ ಇತರ ಭಾಗಗಳು ಚಂಡಮಾರುತದ ವಿಕೋಪಕ್ಕೆ ಗುರಿಯಾಗಿವೆ. ಅದೇ ವೇಳೆ, ದೇಶದ ಪೂರ್ವ ಕರಾವಳಿಯು ಭೀಕರ ದಿಢೀರ್ ಪ್ರವಾಹವನ್ನು ಎದುರಿಸುತ್ತಿದೆ.

ತಿಂಗಳುಗಳ ಕಾಲ ಭೀಕರ ಕಾಡ್ಗಿಚ್ಚನ್ನು ಅನುಭವಿಸಿದ ಆಸ್ಟ್ರೇಲಿಯವನ್ನು ಇತ್ತೀಚಿನ ವಾರಗಳಲ್ಲಿ ತೀವ್ರ ಹವಾಮಾನ ಪ್ರಕೋಪ ಕಾಡುತ್ತಿದೆ. ಇದರ ಪರಿಣಾಮವಾಗಿ ಒಮ್ಮೆ ಜಡಿಮಳೆಯಾದರೆ, ಇನ್ನೊಮ್ಮೆ ಆಲಿಕಲ್ಲು ಭರಿತ ಬಿರುಗಾಳಿ ಬೀಸುತ್ತದೆ, ಬಲವಾದ ಗಾಳಿ ಬೀಸುತ್ತದೆ ಹಾಗೂ ಹಲವು ಸಂದರ್ಭಗಳಲ್ಲಿ ವಾತಾವರಣವು ಬಿಸಿ ಮತ್ತು ಶುಷ್ಕವಾಗಿರುತ್ತದೆ.

ರವಿವಾರ ವೆಸ್ಟನ್ ಆಸ್ಟ್ರೇಲಿಯದಲ್ಲಿ ಸುಮಾರು 12 ಕಡೆ ಕಾಡ್ಗಿಚ್ಚು ಉರಿಯುತ್ತಿದೆ. ಅದೇ ವೇಳೆ, ನ್ಯೂಸೌತ್‌ ವೇಲ್ಸ್‌ ನಲ್ಲಿ ಶನಿವಾರ 20 ವರ್ಷಗಳಲ್ಲೇ ಅಧಿಕ ಪ್ರಮಾಣದ ಜಡಿ ಮಳೆ ಸುರಿದಿದೆ. ಈ ಭಾಗಗಳಲ್ಲಿ ದಿಢೀರ್ ಪ್ರವಾಹ ಸಂಭವಿಸಬಹುದು ಎಂಬ ಎಚ್ಚರಿಕೆಯನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News