ದಿಲ್ಲಿ: ವಿಳಂಬ ಸಮರ್ಥಿಸಿದ ಚು. ಆಯೋಗ

Update: 2020-02-09 17:49 GMT

ದಿಲ್ಲಿ: ವಿಳಂಬ ಸಮರ್ಥಿಸಿದ ಚು. ಆಯೋಗ

ಹೊಸದಿಲ್ಲಿ, ಫೆ.9: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 62.59 ಶೇಕಡ ಮತದಾನವಾಗಿದೆಯೆಂದು ಚುನಾವಣಾ ಆಯೋಗ ರವಿವಾರ ಘೋಷಿಸಿದೆ. ಮತದಾನದ ಅಂತಿಮ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲು ತಾನು ವಿಳಂಬಿಸಿರುವುದನ್ನು ಅದು ಸಮರ್ಥಿಸಿದೆ.

 ದಿಲ್ಲಿಯಲ್ಲಿ ಶೇಕಡ 62.59 ಶೇಕಡ ಮತದಾನವಾಗಿದೆ. ಇದು ಲೋಕಸಭಾ ಚುನಾವಣೆಗಿಂತ ಶೇ.2ರಷ್ಟು ಅಧಿಕ ಮತದಾನವಾಗಿದೆಯೆಂದು ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತದಾನ ಪ್ರಮಾಣದ ಅಂತಿಮ ಅಂಕಿಸಂಖ್ಯೆಗಳನ್ನು ಪ್ರಕಟಿಸುವಲ್ಲಿ ಚುನಾವಣಾ ಆಯೋಗದ ವಿಳಂಬಿಸಿಯೆಂಬ ಎಎಪಿಯ ಟೀಕೆಯನ್ನು ತಳ್ಳಿಹಾಕಿದ ಅವರು, ಮತದಾನದ ಅಂತಿಮ ಫಲಿತಾಂಶಗಳನ್ನು ಪ್ರಕಟಿಸುವ ಮುನ್ನ ಪ್ರತಿಯೊಂದು ಮತವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ ಎಂದವರು ಹೇಳಿದರು.

ಮತದಾನ ನಿರ್ವಹಣಾಧಿಕಾರಿಗಳು ರಾತ್ರಿಯಿಡೀ ವ್ಯತ್ಯಸ್ತರಾಗಿದ್ದರು. ಹೀಗಾಗಿ ವಿಧಾನಸಭಾ ಕ್ಷೇತ್ರವಾರು ದತ್ತಾಂಶಗಳನ್ನು ದಾಖಲಿಸಬೇಕಾಗುತ್ತದೆ. ದತ್ತಾಂಶ ದಾಖಲೀಕರಣದಲ್ಲಿ ನಿಖರತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾದದಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News