ಸಿಎಎ: ಪುತ್ರ ಬಂಧನ ಕೇಂದ್ರಕ್ಕೆ ಹೋಗಬಹುದು ಎಂಬ ಭೀತಿಯಿಂದ ತಂದೆ ಆತ್ಮಹತ್ಯೆ

Update: 2020-02-09 17:45 GMT

ಕೋಲ್ಕತಾ,ಫೆ.9: ತನ್ನ ಪುತ್ರನ ಗುರುತಿನ ದಾಖಲೆಗಳು ದೋಷಯುಕ್ತವಾಗಿರುವುದರಿಂದ ಪೌರತ್ವ ಸಾಬೀತಾಗದೆ ಆತನನ್ನು ಬಂಧನ ಕೇಂದ್ರಕ್ಕೆ ಕಳುಹಿಸಬಹುದು ಎಂದು ಭಯಗೊಂಡಿದ್ದ ನಾಡಿಯಾ ಜಿಲ್ಲೆಯ ತೆಹತಾ ನಿವಾಸಿ ಶಂಭುಚರಣ ನಾಥ್ (55) ಎನ್ನುವವರು ತನ್ನ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ರಿಕ್ಷಾ ಎಳೆಯುವ ವೃತ್ತಿಯಲ್ಲಿದ್ದರು.

ಸಿಎಎ ತನ್ನ ತಂದೆಯ ಆತ್ಮಹತ್ಯೆಗೆ ಕಾರಣ ಎಂದು ನಾಥ್ ಪುತ್ರ ಪ್ರಸೇನಜಿತ್ ಪೊಲೀಸರಿಗೆ ತಿಳಿಸಿದ್ದಾರೆ. ನಾಥ್ 1960ರ ದಶಕದ ಕೊನೆಯಲ್ಲಿ ಆಗಿನ ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ)ದಿಂದ ಭಾರತಕ್ಕೆ ಆಗಮಿಸಿದ್ದರು.

ಮೂರು ವರ್ಷಗಳ ಹಿಂದೆ ಪುತ್ರ ಮೃತ್ಯುಂಜಯ್ ಹಾವು ಕಡಿತದಿಂದ ಮೃತಪಟ್ಟಿದ್ದ. ಈಗ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳಬೇಕಾಗಬಹುದು. ಮಗ ಪ್ರಸೇನಜಿತ್‌ನ ಆಧಾರ,ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳಲ್ಲಿ ತಪ್ಪುಗಳಿರುವುದರಿಂದ ಅಧಿಕಾರಿಗಳು ಆತನನ್ನು ವಿದೇಶಿಯನೆಂದು ಗುರುತಿಸಿ ಬಂಧನ ಕೇಂದ್ರಕ್ಕೆ ಕಳುಹಿಸಬಹುದು ಎಂದು ಭಯಪಟ್ಟಿದ್ದರು. ಹಲವಾರು ಬಾರಿ ಪ್ರಯತ್ನಿಸಿದ್ದರೂ ದಾಖಲೆಗಳಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಸಾಧ್ಯವಾಗಿರಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News