×
Ad

ಆದಿತ್ಯ ಮೆಹ್ತಾ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್

Update: 2020-02-10 23:44 IST

   ಪುಣೆ, ಫೆ.10: ಹಲವು ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿರುವ ಪಂಕಜ್ ಅಡ್ವಾಣಿ ಅವರನ್ನು 6-2 ಅಂತರದಿಂದ ಸದೆಬಡಿದ ಸ್ನೂಕರ್ ಆದಿತ್ಯ ಮೆಹ್ತಾ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದ್ದಾರೆ. ರವಿವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್ ನ್ನು (ಪಿಎಸ್‌ಪಿಬಿ)ಪ್ರತಿನಿಧಿಸಿದ ಮೆಹ್ತಾ ಮೊದಲ ಫ್ರೇಮ್‌ನ್ನು 103-17 ಅಂತರದಿಂದ ಗೆದ್ದುಕೊಂಡು ಭರ್ಜರಿ ಆರಂಭ ಪಡೆದರು. ಮೆಹ್ತಾ ಮುಂದಿನ ಎರಡು ಫ್ರೇಮ್‌ಗಳನ್ನು 50-58, 47-48 ಅಂತರದಿಂದ ಕಳೆದುಕೊಂಡರು. ಈ ಹಂತದಲ್ಲಿ ಅಡ್ವಾಣಿ ಸ್ಪರ್ಧೆಯಲ್ಲಿ ಮರುಹೋರಾಟ ನೀಡುವ ರೀತಿ ಕಂಡುಬಂದರು. ಆದರೆ, ಮೆಹ್ತಾ ಆ ಬಳಿಕದ ನಾಲ್ಕು ಫ್ರೇಮ್‌ಗಳಲ್ಲಿ ಜಯ ಸಾಧಿಸಿ 6-2 ಅಂತರದಿಂದ ಜಯ ಸಾಧಿಸಿದರು. ಮಹಿಳೆಯರ ಸ್ನೂಕರ್ ಫೈನಲ್‌ನಲ್ಲಿ ಕರ್ನಾಟಕದ ವಿದ್ಯಾ ಪಿಳ್ಳೈ ಮಧ್ಯಪ್ರದೇಶದ ಆಮೀ ಕಮಾನಿ ವಿರುದ್ಧ 3-2(41-68, 57-35, 37-61, 69-50, 87-05)ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಹಿರಿಯರ ಮಹಿಳಾ ಸ್ನೂಕರ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News