‘ಟುಕ್ಡೆ ಟುಕ್ಡೆ ಗ್ಯಾಂಗ್’ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಸಂಸತ್ತಿಗೆ ತಿಳಿಸಿದ ಸರಕಾರ

Update: 2020-02-11 14:49 GMT

ಹೊಸದಿಲ್ಲಿ, ಫೆ. 11: ‘ಟುಕ್ಡೆ ಟುಕ್ಡೆ ಗ್ಯಾಂಗ್’ ಎಂದು ಕರೆಯಲಾಗುವ ಯಾವುದೇ ಗುಂಪಿನ ಬಗ್ಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

 ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಖಾತೆಯ ಸಹಾಯಕ ಸಚಿವ ಜಿ. ಕಿಷನ್ ರೆಡ್ಡಿ, ಕಾನೂನು ಜಾರಿ ಸಂಸ್ಥೆ ನೀಡಿದ ನಿರ್ದಿಷ್ಟ ಮಾಹಿತಿ ‘ಟುಕ್ಡೆ ಟುಕ್ಡೆ ಗ್ಯಾಂಗ್’ ಪದಗಳಿಗೆ ಆಧಾರವಾಗಿದೆಯೇ ಎಂಬ ಬಗ್ಗೆ ಸಚಿವಾಲಯದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದರು. ಟುಕ್ಡೆ ಟುಕ್ಡೆ ಗ್ಯಾಂಗ್ ಬಗ್ಗೆ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಸರಕಾರದ ಗಮನಕ್ಕೆ ತಂದಿಲ್ಲ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಸದಸ್ಯರಾದ ವಿನ್ಸೆಂಟ್ ಎಚ್. ಪಾಲಾ ಹಾಗೂ ಜಸ್ಬೀರ್ ಸಿಂಗ್ ಗಿಲ್ ಅವರ ಪ್ರಶ್ನೆಗೆ ಜಿ. ಕಿಷನ್ ರೆಡ್ಡಿ ಈ ಪ್ರತಿಕ್ರಿಯೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News