ದಿಲ್ಲಿ ಚುನಾವಣೆ: ಆದಿತ್ಯನಾಥ್ ಪ್ರಚಾರ ಮಾಡಿದ್ದ 7 ಕ್ಷೇತ್ರಗಳಲ್ಲೂ ಸೋಲುಂಡ ಬಿಜೆಪಿ

Update: 2020-02-11 14:56 GMT

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತ ನೀಡಿದ್ದರೆ, ಮತ್ತೊಂದು ಕಾರಣದಿಂದ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಆದಿತ್ಯನಾಥ್ ಪ್ರಚಾರ ನಡೆಸಿದ 7 ಕಡೆಗಳಲ್ಲೂ ಬಿಜೆಪಿ ಸೋಲನುಭವಿಸಿದೆ.

ಆದಿತ್ಯನಾಥ್ ಪತ್ಪರ್ ಗಂಜ್, ಕಿರಾರಿ, ಮೆಹ್ರೌಲಿ, ಉತ್ತಮ್ ನಗರ್, ಸೌರಭ್ ವಿಹಾರ್, ದ್ವಾರ್ಕಾ, ತುಘಲಕ್ ಬಾದ್, ವಿಕಾಸ್ ಪುರಿ, ರೋಹಿಣಿ, ಕಾರವಾಲ್ ನಗರ್, ಜಹಾಂಗಿರ್ಪುರಿ ಮತ್ತು ಬದಾರ್ಪುರ್ ನಲ್ಲಿ ಪ್ರಚಾರ ನಡೆಸಿದ್ದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಈ ಎಲ್ಲಾ ಪ್ರಚಾರ ಕಾರ್ಯಕ್ರಮಗಳಲ್ಲಿ ಆದಿತ್ಯನಾಥ್ ಕೋಮುಪ್ರಚೋದಕ ಮಾತುಗಳನ್ನಾಡಿದ್ದರು. ಶಾಹಿನ್ ಬಾಗ್ ನಲ್ಲಿ ದೇಶದ್ರೋಹಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಬಿರಿಯಾನಿ ರಾಜಕೀಯ ನಡೆಯುತ್ತಿದೆ ಎಂದಿದ್ದರು. ಈ ಹೇಳಿಕೆಗಾಗಿ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News