6 ತಿಂಗಳಲ್ಲಿ 10 ಜನರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ

Update: 2020-02-12 14:21 GMT

ಸೊಲ್ಲಾಪುರ,ಫೆ.12: ಸೊಲ್ಲಾಪುರ ಜಿಲ್ಲೆಯ 16ರ ಹರೆಯದ ದಲಿತ ಬಾಲಕಿಯ ಮೇಲೆ ಕಳೆದ ಆರು ತಿಂಗಳಲ್ಲಿ ಹತ್ತು ಜನರು ಅತ್ಯಾಚಾರವೆಸಗಿದ್ದಾರೆ. ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದು,ಇತರರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಈ ಬಾಲಕಿ ಮಂಗಳವಾರ ನಗರದ ದೇವಸ್ಥಾನವೊಂದರ ಹೊರಗೆ ಅಳುತ್ತಿರುವುದನ್ನು ಕಂಡ ಕೆಲವು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ಮಾನಸಿಕ ಕ್ಷೋಭೆಗೊಳಗಾಗಿದ್ದಳು. ಆದರೆ ಪೊಲೀಸರು ಆಕೆಯಲ್ಲಿ ವಿಶ್ವಾಸ ಮೂಡಿಸಿದ ಬಳಿಕ ತನ್ನ ಮೇಲೆ ನಡೆದಿರುವ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ. ಕೆಲವು ಆರೋಪಿಗಳು ಬಾಲಕಿಯ ಸ್ನೇಹಿತರಾಗಿದ್ದು,ನಂತರ ಇತರರೂ ಅಪರಾಧದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ಬುಧವಾರ ಇಲ್ಲಿ ತಿಳಿಸಿದರು.

ಆರೋಪಿಗಳಲ್ಲಿ ಕೆಲವು ರಿಕ್ಷಾ ಚಾಲಕರು ಸೇರಿದ್ದು,ಬಾಲಕಿಯನ್ನು ಬಲಾತ್ಕಾರದಿಂದ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದರು.

ಬಾಲಕಿಯ ತಂದೆ ಕೆಲವು ಸಮಯದ ಹಿಂದೆ ನಿಧನರಾಗಿದ್ದು,ಜೀವನ ನಿರ್ವಹಣೆಗಾಗಿ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದಳು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News