×
Ad

ವಿಮಾನ ನಿಲ್ದಾಣಗಳು,ವಿಮಾನಗಳಲ್ಲಿ ಇ-ಸಿಗರೇಟಿಗೆ ನಿಷೇಧ

Update: 2020-02-12 20:30 IST

ಹೊಸದಿಲ್ಲಿ,ಫೆ.12: ನಾಗರಿಕ ವಾಯುಯಾನ ಸುರಕ್ಷಾ ಬ್ಯೂರೊ (ಬಿಸಿಎಎಸ್) ದೇಶದಲ್ಲಿಯ ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಇ-ಸಿಗರೇಟ್ ಮತ್ತು ಅಂತಹ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಇ-ಹುಕ್ಕಾ ಮತ್ತು ಅಂತಹ ಸಾಧನಗಳು ಇ-ಸಿಗರೇಟ್ ವ್ಯಾಪ್ತಿಯಲ್ಲಿ ಸೇರುತ್ತವೆ ಎಂದು ನಿರ್ಧರಿಸಲಾಗಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇಂತಹ ಉತ್ಪನ್ನಗಳ ವಿತರಣೆ,ಮಾರಾಟ,ದಾಸ್ತಾನು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಭಾರತದಿಂದ ನಿರ್ಗಮಿಸುವ ಅಥವಾ ಆಗಮಿಸುವ ಎಲ್ಲ ವಿಮಾನಗಳಲ್ಲಿಯೂ ಇವುಗಳಿಗೆ ನಿಷೇಧ ಹೇರಲಾಗಿದೆ ಎಂದು ಬಿಸಿಎಎಸ್ ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News