ಕೊರೋನವೈರಸ್: ಮೃತರ ಸಂಖ್ಯೆ 1,110ಕ್ಕೆ

Update: 2020-02-12 15:52 GMT

ಬೀಜಿಂಗ್ (ಚೀನಾ), ಫೆ. 12: ಕೊರೋನವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 1,110ಕ್ಕೆ ಏರಿದೆ. ಸೋಂಕಿನ ಕೇಂದ್ರ ಬಿಂದುವಾಗಿರುವ ಹುಬೈ ಪ್ರಾಂತದಲ್ಲಿ 94 ಹೊಸ ಸಾವಿನ ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗಿವೆ.

 ಅದೇ ವೇಳೆ, ಹುಬೈ ರಾಜ್ಯದಲ್ಲಿ ಹೊಸದಾಗಿ 1,638 ಕೊರೋನವೈರಸ್ ಸೋಂಕು ಪ್ರಕರಣಗಳು ಈ ವರದಿಯಲ್ಲಿ ದೃಢಪಟ್ಟಿವೆ. ಇದರೊಂದಿಗೆ ಚೀನಾದ್ಯಂತ ಸೋಂಕಿಗೆ ಒಳಗಾದವರ ಸಂಖ್ಯೆ 44,200ನ್ನು ದಾಟಿದೆ ಎಂದು ಹುಬೈಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದ ಅಧಿಕಾರಿಗಳು ಮಂಗಳವಾರ ಹುಬೈಯ ಇಬ್ಬರು ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸಿದೆ. ಇಲ್ಲಿ ಕಳೆದ ತಿಂಗಳಿನಿಂದ ಕೋಟ್ಯಂತರ ಜನರು ಬೀಗಮುದ್ರೆಯಲ್ಲಿದ್ದಾರೆ. ಅದರ ರಾಜಧಾನಿ ವುಹಾನ್‌ನಲ್ಲಿ ತೀವ್ರ ನಿರ್ಬಂಧಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News