‘ಡೈಮಂಡ್ ಪ್ರಿನ್ಸೆಸ್’ ಹಡಗಿನ ಇಬ್ಬರು ಭಾರತೀಯ ನಾವಿಕರಲ್ಲಿ ಕೊರೋನವೈರಸ್ ಪತ್ತೆ

Update: 2020-02-12 16:09 GMT

ಟೋಕಿಯೊ (ಜಪಾನ್), ಫೆ. 12: ಜಪಾನ್‌ನ ಯೊಕೊಹಾಮದಲ್ಲಿ ಲಂಗರು ಹಾಕಿರುವ ‘ಡೈಮಂಡ್ ಪ್ರಿನ್ಸೆಸ್’ ಪ್ರವಾಸಿ ಹಡಗಿನ ಇಬ್ಬರು ಭಾರತೀಯ ನಾವಿಕರಲ್ಲಿ ಕೊರೋನವೈರಸ್ ಇರುವುದು ದೃಢಪಟ್ಟಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.

 3,700ಕ್ಕೂ ಅಧಿಕ ಪ್ರವಾಸಿಗರು ಮತ್ತು ಸಿಬ್ಬಂದಿ ಇರುವ ಹಡಗನ್ನು ಫೆಬ್ರವರಿ 3ರಿಂದ ಪ್ರತ್ಯೇಕಿಸಲಾಗಿದೆ. ಫೆಬ್ರವರಿ 19ರವರೆಗೆ ಅದು ಪ್ರತ್ಯೇಕವಾಗಿಯೇ ಇರುತ್ತದೆ.

ಹಡಗಿನಲ್ಲಿರುವ 174 ಮಂದಿಯಲ್ಲಿ ಈವರೆಗೆ ಕೊರೋನವೈರಸ್ ಇರುವುದು ಪತ್ತೆಯಾಗಿದೆ. ಅದರಲ್ಲಿ 138 ಭಾರತೀಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News