ಸಾಲಕ್ಕಾಗಿ ಬ್ಯಾಂಕ್ ಗೆ ತೆರಳುತ್ತಿದ್ದಾಗ ಲಾಟರಿ ಖರೀದಿಸಿದ ಕೇರಳದ ವ್ಯಕ್ತಿ ಈಗ ಕೋಟ್ಯಾಧಿಪತಿ!
Update: 2020-02-12 23:02 IST
ಕಣ್ಣೂರು: ತನ್ನ ಹಳೆಯ ಸಾಲಗಳನ್ನು ತೀರಿಸುವುದಕ್ಕಾಗಿ ಬ್ಯಾಂಕ್ ಗೆ ಮತ್ತೊಮ್ಮೆ ಸಾಲಕ್ಕೆಂದು ಹೋಗುತ್ತಿದ್ದಾಗ ಲಾಟರಿ ಖರೀದಿಸಿದ ವ್ಯಕ್ತಿಯೊಬ್ಬರು 12 ಕೋಟಿ ರೂ. ಗೆದ್ದ ಘಟನೆ ಕೇರಳದಲ್ಲಿ ನಡೆದಿದೆ.
ಕ್ರಿಸ್ ಮಸ್ - ಹೊಸ ವರ್ಷದ ಲಾಟರಿ ಇದಾಗಿದ್ದು, ಈ ವಾರ ಫಲಿತಾಂಶ ಪ್ರಕಟಗೊಂಡಿದೆ. ಈಗಾಗಲೇ 3 ಬಾರಿ ಸಾಲಗಳನ್ನು ಪಡೆದು ಕಂಗಾಲಾಗಿರುವ ರಬ್ಬರ್ ಟ್ಯಾಪಿಂಗ್ ವೃತ್ತಿಯ ಕೇರಳ ಕಣ್ಣೂರಿನ ರಾಜನ್ ಈ ಎಲ್ಲಾ ಸಾಲಗಳನ್ನು ತೀರಿಸುವುದಕ್ಕಾಗಿ ಮತ್ತೊಮ್ಮೆ ಸಾಲ ಪಡೆಯಲು ಬ್ಯಾಂಕ್ ಗೆ ಹೋಗುತ್ತಿದ್ದರು.
ಇದೀಗ 12 ಕೋಟಿ ರೂ. ಗೆದ್ದ ಸಂತಸದಲ್ಲಿರುವ ಅವರು ಸಾಲಗಳನ್ನು ತೀರಿಸಬಹುದು ಎಂದು ನಿಟ್ಟುಸಿರು ಬಿಟ್ಟಿದ್ದು, ತನ್ನ ಪುತ್ರಿಗೆ ಶಿಕ್ಷಣ ಕೊಡಿಸುವ ಕನಸಿದೆ ಎಂದಿದ್ದಾರೆ. ತನ್ನ ಮನೆಯ ಬಾಕಿ ಇರುವ ಕೆಲಸಗಳನ್ನೂ ಮುಗಿಸಬೇಕು ಎಂದವರು ಬಯಸಿದ್ದಾರೆ.
ನಿಯಮಗಳ ಪ್ರಕಾರ, ರಾಜನ್ ತೆರಿಗೆ ಮತ್ತು ಏಜೆನ್ಸಿ ಕಮಿಷನ್ ಕಡಿತಗೊಂಡ ನಂತರ 7.2 ಕೋಟಿ ರೂ. ಸ್ವೀಕರಿಸಲಿದ್ದಾರೆ.