ಎನ್‌ಆರ್‌ಸಿ ದತ್ತಾಂಶ ಆಫ್‌ ಲೈನ್: ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು

Update: 2020-02-13 15:23 GMT

ಗುವಾಹತಿ, ಫೆ. 13: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ದತ್ತಾಂಶ ಆಫ್‌ಲೈನ್ ಆಗಿರುವ ಕಾರಣಕ್ಕೆ ಉದ್ಯೋಗಕ್ಕೆ ರಾಜೀನಾಮೆ ನೀಡುವ ಮುನ್ನ ಇಮೇಲ್ ಐಡಿಯ ಪಾಸ್‌ವರ್ಡ್ ಸಲ್ಲಿಸಲು ವಿಫಲವಾದ ಮಾಜಿ ಮಹಿಳಾ ಉದ್ಯೋಗಿ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎನ್‌ಆರ್‌ಸಿ ದತ್ತಾಂಶಗಳ ಜವಾಬ್ದಾರಿ ನಿರ್ವಹಿಸಲು ವಿಪ್ರೊಗೆ ನೀಡಿದ ಗುತ್ತಿಗೆ ನವೀಕರಿಸದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಅಸ್ಸಾಂನ ಅಂತಿಮ ಎನ್‌ಆರ್‌ಸಿ ಪಟ್ಟಿಯ ಸಂಪೂರ್ಣ ದತ್ತಾಂಶ ಆಫ್‌ಲೈನ್ ಆಗಿತ್ತು. ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಒಟ್ಟು 3.3 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 19 ಲಕ್ಷ ಅರ್ಜಿದಾರರು ಹೊರಗುಳಿದಿದ್ದರು. ಈ ಅಂತಿಮ ಪಟ್ಟಿ ದತ್ತಾಂಶ ಆಫ್‌ಲೈನ್ ಆಗಿತ್ತು. ದತ್ತಾಂಶ ಆಫ್‌ಲೈನ್ ಆಗಿರುವುದರಿಂದ ತಮ್ಮ ಸ್ಥಿತಿಗತಿ ಪರಿಶೀಲಿಸಲು ಹಾಗೂ ದಾಖಲೆಗಳ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ರಾಜೀನಾಮೆ ನೀಡುವ ಮುನ್ನ ಎರಡು ಅಧೀಕೃತ ಈಮೇಲ್ ಐಡಿಗಳ ಪಾಸ್‌ವರ್ಡ್‌ಗಳನ್ನು ಹಿಂದಿರುಗಿಸಿಲ್ಲ ಎಂದು ಎನ್‌ಆರ್‌ಸಿಯ ಮಾಜಿ ಯೋಜನಾ ಮ್ಯಾನೇಜರ್ ವಿರುದ್ಧ ಎನ್‌ಆರ್‌ಸಿಯ ಕಾರ್ಯಕಾರಿ ನಿರ್ದೇಶಕ ಚಂದನ ಮಹಾಂತ ಬುಧವಾರ ದೂರು ದಾಖಲಿಸಿದ್ದಾರೆ.

‘‘ಎನ್‌ಆರ್‌ಸಿ ಪರಿಷ್ಕರಣಾ ಪ್ರಕ್ರಿಯೆ ತುಂಬಾ ಸೂಕ್ಷ್ಮವಾದುದು. ಸುಪ್ರೀಂ ಕೋರ್ಟ್‌ನ ನೇರ ಉಸ್ತುವಾರಿಯಲ್ಲಿ ಇದನ್ನು ಮಾಡಬೇಕು. ಈ ಮೇಲೆ ಹೇಳಲಾದ ಈ ಮೇಲ್ ತುಂಬಾ ಮುಖ್ಯವಾದ ಸಂವಹನ/ಎನ್‌ಆರ್‌ಸಿ ಕುರಿತ ಮಾಹಿತಿಯನ್ನು ಒಳಗೊಂಡಿದೆ’’ ಎಂದು ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News