ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 1 ರನ್ ಅಂತರದಲ್ಲಿ ಜಯ

Update: 2020-02-13 17:43 GMT

ಬಫಲೋ ಪಾರ್ಕ್, ಫೆ.13: ಇಂಗ್ಲೆಂಡ್ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 1 ರನ್ ಅಂತರದಲ್ಲಿ ರೋಚಕ ಜಯ ಗಳಿಸಿದೆ.

 ಬಫಲೋ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 178 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತು.

   ಕೊನೆಯಲ್ಲಿ ಇಂಗ್ಲೆಂಡ್‌ಗೆ ಗೆಲುವಿಗೆ 7 ಎಸೆತಗಳಲ್ಲಿ ಏಳು ರನ್ ಗಳಿಸಬೇಕಾಗಿತ್ತು. ಆದರೆ ಆಂಗ್ಲರಿಗೆ 5 ರನ್ ಗಳಿಸಲು ಸಾಧ್ಯವಾಯಿತು.

      

ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ 70 ರನ್ ಮತ್ತು ನಾಯಕ ಇಯಾನ್‌ಮೊರ್ಗನ್ 52 ಸೇರಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. ಆದರೆ ಸಹ ಆಟಗಾರರು ಕೈಕೊಟ್ಟ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಲುಂಗಿ ಗಿಡಿ (30ಕ್ಕೆ 3) ಕೊನೆಯ ಓವರ್‌ನಲ್ಲಿ ಟಾಮ್ ಕುರ್ರನ್ (2), ಮೊಯಿನ್ ಅಲಿ (5) ಮತ್ತು ಆದಿಲ್ ರಶೀದ್ (1) ಔಟಾದರು. ಇದರೊಂದಿಗೆ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಮುಗ್ಗರಿಸಿತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತಚ್ತು.

 ತೆಂಬಾ ಬವುಮಾ 43 ರನ್, ನಾಯಕ ಕ್ವಿಂಟನ್ ಡೆ ಕಾಕ್ 31 ರನ್ ಮತ್ತು ಡುಸಾನ್ 31 ರನ್ ಗಳಿಸಿದರು.

ಜುಲೈ 2018ರಿಂದ ಇಂಗ್ಲೆಂಡ್ ತನ್ನ ಮೊದಲ ಂಟಿ-20 ಸರಣಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News