ಬರೋಡ ಮೇಲೆ ಕರ್ನಾಟಕದ ಬಿಗು ಹಿಡಿತ

Update: 2020-02-13 17:44 GMT

ಬೆಂಗಳೂರು, ಫೆ.13: ಬರೋಡ ವಿರುದ್ಧ ರಣಜಿ ಟ್ರೋಫಿ 9ನೇ ಸುತ್ತಿನ ಪಂದ್ಯದ ಎರಡನೇ ದಿನವೂ ಕರ್ನಾಟಕ ಹಿಡಿತವನ್ನು ಮುಂದುವರಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದ ಕೊನೆಯಲ್ಲಿ ಬರೋಡ ಎರಡನೇ ಇನಿಂಗ್ಸ್‌ನಲ್ಲಿ 67 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿದೆ.

    ಮೊದಲ ದಿನದಾಟದ ಕೊನೆಯ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 85 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿದ್ದ ಕರ್ನಾಟಕ ಆಟ ಮುಂದುವರಿಸಿ 72.5 ಓವರ್‌ಗಳಲ್ಲಿ 263 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ. ಬುಧವಾರ ದಿನದ ಕೊನೆಯಲ್ಲಿ ಮಿಥುನ್ 9 ರನ್ ಮತ್ತು ಅರತ್ 19 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅಭಿಮನ್ಯು ಮಿಥುನ್ 40, ವಿಕೆಟ್ ಕೀಪರ್ ಶರತ್ 34, ಮತ್ತು ರೋಣಿತ್ ಮೋರೆ 8 ರನ್ ಗಳಿಸಿ ಔಟಾದರು. ಬರೋಡದ ಶುಐಬ್ ಸೋಪಾರಿಯಾ 83ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಕರ್ನಾಟಕ 148 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಬರೋಡದ ಅಹ್ಮದ್‌ನೂರ್ ಪಠಾಣ್ 90, ಮತ್ತು ದೀಪಕ್ ಹೂಡಾ 50 ರನ್ ಗಳಿಸಿ ತಂಡದ ಸ್ಕೋರ್‌ನ್ನು ಎರಡನೇ ಇನಿಂಗ್ಸ್ ನಲ್ಲಿ 200ರ ಗಡಿ ದಾಟಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News