ಆಫ್ರಿಕಾ ಪರ ಸ್ಟೇನ್ ದಾಖಲೆ

Update: 2020-02-13 17:55 GMT

  ಬಫಲೋಪಾರ್ಕ್, ಫೆ. 13: ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಪರ ಗರಿಷ್ಠ ವಿಕೆಟ್ ದಾಖಲೆಯನ್ನು ಸ್ಟೇಯ್ನಿ ಹೊಂದಿದ್ದಾರೆ. ಅವರು 93 ಟೆಸ್ಟ್ ಪಂದ್ಯಗಳಲ್ಲಿ 439 ವಿಕೆಟ್ ಮತ್ತು 145 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದಿದ್ದಾರೆ. ಡೇಲ್ ಸ್ಟೇನ್ ಬುಧವಾರ ಬಫಲೋ ಪಾರ್ಕ್‌ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದ ದಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್ ವಿಕೆಟ್ ಪಡೆದು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆ ಬರೆದರು. 45ನೇ 62ನೇ ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು. ಮೂರು ಪಂದ್ಯಗಳ ಮೊದಲ ಸ್ಪರ್ಧೆಯಲ್ಲಿ ಸ್ಟೇನ್ ಈ ಸಾಧನೆ ಮಾಡಿದರು, ಪ್ರೋಟಿಯಸ್ ಒಂದು ರನ್ನಿಂದ ಜಯಗಳಿಸಿತು. ಶ್ರೀಲಂಕಾದ ಲಸಿತ್ ಮಾಲಿಂಗ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 106 ವಿಕೆಟ್‌ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಶಾಹಿದ್ ಅಫ್ರಿದಿ (96), ಶಾಕೀಬ್ ಅಲ್ ಹಸನ್ (92), ಉಮರ್ ಗುಲ್ (85) ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News