ಮನ್‌ಪ್ರೀತ್ ಸಿಂಗ್‌ಗೆ ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿ

Update: 2020-02-13 18:25 GMT

ಹೊಸದಿಲ್ಲಿ, ಫೆ.13: ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಗುರುವಾರ ಎಫ್‌ಐಎಚ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

 ಇದರೊಂದಿಗೆ ಮನ್‌ಪ್ರೀತ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಲ್ಜಿಯಂನ ಆರ್ಥರ್ ವ್ಯಾನ್ ಡೋರೆನ್ ಮತ್ತು ಅರ್ಜೆಂಟೀನಾದ ಲ್ಯೂಕಾಸ್ ವಿಲಾ ಅವರನ್ನು ಹಿಂದಿಕ್ಕಿ 2019ರ ಪ್ರಶಸ್ತಿ ಪಡೆದಿದ್ದಾರೆ.

 ರಾಷ್ಟ್ರೀಯ ಸಂಘಟನೆಗಳು , ಮಾಧ್ಯಮಗಳು, ಅಭಿಮಾನಿಗಳು ಮತ್ತು ಆಟಗಾರರನ್ನು ಒಳಗೊಂಡ ಒಟ್ಟು ಮತಗಳಲ್ಲಿ ಶೇ 35.2 ರಷ್ಟು ಮನ್‌ಪ್ರೀತ್ ಗೆದ್ದಿದ್ದಾರೆ. 2017 ಮತ್ತು 2018 ರಲ್ಲಿ ಪ್ರಶಸ್ತಿ ವಿಜೇತ ವ್ಯಾನ್ ಡೋರೆನ್ ಅವರು ಶೇಕಡಾ 19.7ರಷ್ಟು ಮತಗಳನ್ನು ಪಡೆದರೆ, ವಿಲ್ಲಾ ಅವರ ಪರ ಶೇಕಡಾ 16.5ರಷ್ಟು ಮತಗಳು ಚಲಾವಣೆಯಾಗಿವೆ. ಬೆಲ್ಜಿಯಂನ ಮಿಡ್‌ಫೀಲ್ಡರ್ ವಿಕ್ಟರ್ ವೆಗ್ನೆಜ್ ಮತ್ತು ಆಸ್ಟ್ರೇಲಿಯದ ಅನುಭವಿ ಜೋಡಿ ಅರಾನ್ ಝಲೆವಿಸ್ಕಿ ಮತ್ತು ಎಡ್ಡಿ ಒಕೆಂಡೆನ್ ಇತರರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

   ಱಱಈ ಪ್ರಶಸ್ತಿ ಪಡೆಯಲು ನನಗೆ ನಿಜವಾಗಿಯೂ ಹೆಮ್ಮೆಯಾಗುತ್ತದೆ. ಇದನ್ನು ನನ್ನ ತಂಡಕ್ಕೆ ಅರ್ಪಿಸಲು ನಾನು ಬಯಸುತ್ತೇನೆ. ನನ್ನ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ವಿಶ್ವದಾದ್ಯಂತದ ನನ್ನ ಹಿತೈಷಿಗಳು ಮತ್ತು ಹಾಕಿ ಅಭಿಮಾನಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ೞೞಎಂದು ಮನ್‌ಪ್ರೀತ್ ಹೇಳಿದ್ದಾರೆ.

      2011ರಲ್ಲಿ ಅಂತರ್‌ರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಮನ್‌ಪ್ರೀತ್ ರಾಷ್ಟ್ರೀಯ ತಂಡಕ್ಕಾಗಿ 263 ಪಂದ್ಯಗಳನ್ನು ಆಡಿದ್ದಾರೆ ಮತ್ತು 2012ರಲ್ಲಿ ಲಂಡನ್ ಮತ್ತು 2016ರಲ್ಲಿ ರಿಯೊ ಒಲಿಂಪಿಕ್ಸ್ ಗಳಲ್ಲಿ ಆಡಿದ್ದಾರೆ. 2018ರ ಪುರುಷರ ವಿಶ್ವಕಪ್‌ನಲ್ಲಿ ಭಾರತ ಐದನೇ ಸ್ಥಾನ ಗಳಿಸಿದ್ದರಿಂದ ಅವರನ್ನು 2017ರಲ್ಲಿ ತಂಡದ ನಾಯಕನನ್ನಾಗಿ ಮಾಡಲಾಗಿತ್ತು. 2019ರಲ್ಲಿ ಎಫ್‌ಐಎಚ್ ಸರಣಿ ಫೈನಲ್ಸ್ ಮತ್ತು ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಮನ್‌ಪ್ರೀತ್ ಸಿಂಗ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಭಾರತವು 2019ರ ಸುಲ್ತಾನ್ ಅಝ್ಲಾನ್ ಷಾ ಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಟೆಸ್ಟ್ ಇವೆಂಟ್‌ನಲ್ಲಿ ಜಯಗಳಿಸಿತು ಮತ್ತು ಬೆಲ್ಜಿ ಯಂನಲ್ಲಿ ನಡೆದ ಐದು ಪಂದ್ಯಗಳಲ್ಲೂ ಜಯ ಗಳಿಸಿತು. ಅಲ್ಲಿ ಆತಿಥೇಯರ ವಿರುದ್ಧ ಮೂರು ಪಂದ್ಯಗಳನ್ನು ಮತ್ತು ಸ್ಪೇನ್ ವಿರುದ್ಧ ಎರಡು ಪಂದ್ಯಗಳನ್ನು ಆಡಿತ್ತು.

 2019ರಲ್ಲಿ ನಮ್ಮ ದೊಡ್ಡ ಗುರಿ ಒಲಿಂಪಿಕ್ಸ್ ನಲ್ಲಿ ನಮ್ಮ ಸ್ಥಾನವನ್ನು ಕಾಯ್ದಿರಿಸುವುದು ಆಗಿತ್ತು. ತಂಡವು ಆ ಗುರಿಯನ್ನು ಸಾಧಿಸಿದೆ. ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ರಶ್ಯವನ್ನು ಎರಡು ಪಂದ್ಯಗಳಲ್ಲಿ 4-2 ಮತ್ತು 7-2 ಅಂತರದಲ್ಲಿ ಸೋಲಿಸಿತು.

ಪುರುಷರ ತಂಡದ ಮಿಡ್‌ಫೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಮತ್ತು ಮಹಿಳಾ ತಂಡದ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ ಸೋಮವಾರ ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News