ಸಾಲೆತ್ತೂರು :ಪೆ.16 ಕ್ಕೆ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರೋಧಿ ಪ್ರತಿಭಟನಾ ಸಮಾವೇಶ

Update: 2020-02-14 15:22 GMT

ವಿಟ್ಲ: ಕೊಳ್ನಾಡು - ಸಾಲೆತ್ತೂರು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಅನ್ನು ಖಂಡಿಸಿ ಪ್ರತಿಭಟನಾ ಸಮಾವೇಶ ಪೆ. 16ರ ಮಧ್ಯಾಹ್ನ ಸಾಲೆತ್ತೂರಿನಲ್ಲಿ ನಡೆಯಲಿದೆ ಎಂದು ಕೊಳ್ನಾಡು - ಸಾಲೆತ್ತೂರು ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕ ಎಂ.ಎಸ್ ಮಹಮ್ಮದ್ ತಿಳಿಸಿದರು.

ಅವರು ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಜನ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸುವುದರ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಪೌರತ್ವ ಸಾಭೀತುಪಡಿಸಲು ಸರ್ಕಾರವೇ ಜಾರಿಗೆ ತಂದಿರುವ ಆಧಾರ್, ಪಾಸ್‌ಪೋರ್ಟ್ ಸರಿಯಾದ ದಾಖಲೆ ಅಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ಇದರ ವಿರುದ್ಧ ಹೋರಾಟ ನಡೆಸಲಾಗು ತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಲೆತ್ತೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

ಪ್ರತಿಭಟನೆಯಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಮೈಸೂರು, ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್ ಭಾಸ್ಕರ್ ಪ್ರಸಾದ್,  ಸಾಲೆತ್ತೂರು ಚರ್ಚ್‌ನ ಧರ್ಮಗುರು ಹೆನ್ರಿ ಡಿಸೋಜ, ಹಾಜಿ ಅಬ್ದುಲ್ ಖಾದರ್ ಉಸ್ತಾದ್ ಬಂಬ್ರಾಣ, ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಮಾಜಿ ಸಚಿವ ಬಿ ರಮಾನಾಥ ರೈ,  ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಸುಭಾಶ್ಚಂದ್ರ ಶೆಟ್ಟಿ , ಬಾಪಕುಂಞ, ಹನೀಫ್ ಖಾನ್ ಕೊಡಾಜೆ, ಬಿ.ಕೆ ಸೇಸಪ್ಪ ಬೆದ್ರಕಾಡು, ಬಿ.ಎಂ.ಅಬ್ಬಾಸ್ ಅಲಿ ಸೇರಿದಂತೆ ವಿವಿದ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು    ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಎ.ಬಿ.ಅಬ್ದುಲ್ಲ, ಅಶ್ರಫ್ ಸಾಲೆತ್ತೂರು, ಪಿ.ಎಂ. ಹಕೀಂ ಪರ್ತಿಪ್ಪಾಡಿ, ಖಲಂದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News