‘ಭೂಮಿ ಹೊರತು ಪಡಿಸಿ ಉಳಿದೆಲ್ಲ ನಿಯಂತ್ರಣ ಕಂಪೆನಿ ಕೈಯಲ್ಲಿ’

Update: 2020-02-14 16:46 GMT

ಕುಂದಾಪುರ : ಕಾರ್ಪೋರೇಟ್ ಫಾರ್ಮಿಂಗ್ ದೇಶದೆಲ್ಲೆಡೆ ಅನುಷ್ಠಾನಗೊಂಡರೆ, ಭೂಮಿಯ ಒಡೆತನವನ್ನು ಹೊರತು ಪಡಿಸಿ ಉಳಿದೆಲ್ಲವುಗಳ ಮೇಲೆ ಕಾರ್ಪೋರೇಟ್ ಕಂಪೆನಿಗಳೇ ನಿಯಂತ್ರಣ ಹೊಂದಿರುತ್ತವೆ. ಹೀಗಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ -ಕೃಷಿ ಕ್ಷೇತ್ರದ ಬೀಜ, ಗೊಬ್ಬರ, ಕೀಟನಾಶಕ, ನೀರು, ಮಾರುಕಟ್ಟೆ ಇತ್ಯಾದಿ- ಕಾರ್ಪೋರೇಟ್ ಕಂಪೆನಿಗಳು ನಿಯಂತ್ರಿಸುತ್ತವೆ ಎಂದು ದೇಶದ ರೈತರ ಇಂದಿನ ದಯನೀಯ ಸ್ಥಿತಿಯ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ನಾಡಿನ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಹೇಳಿದ್ದಾರೆ.

ಶುಕ್ರವಾರ ಸಂಜೆ ಕುಂದಾಪುರ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಸಮುದಾಯ ಕುಂದಾಪುರ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ‘ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯದ ಮೇಲೆ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಈಗ ರೈತರ ನಿಯಂತ್ರಣದಲ್ಲಿ ಏನೂ ಇಲ್ಲ. ಕೃಷಿಕರು ಪ್ರಸ್ತುತ ಕಾರ್ಪೋ ರೇಟ್ ಕಂಪೆನಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುವುದೇ ಭಾರತದ ಕೃಷಿ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದ ಅವರು, ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಆಳುತ್ತಿರುವ ಕಾರ್ಪೋರೇಟ್ ಕಂಪೆನಿಗಳು ಇಂದು ದೇಶದ ಕೃಷಿ ಕ್ಷೇತ್ರವನ್ನು ಹೈಾಕ್ ಮಾಡಿವೆ ಎಂದು ಎಚ್ಚರಿಸಿದರು.

25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಹೊಣೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಇದು ಸ್ವಾಭಾವಿಕ ಆಗುತಿದ್ದುದರಿಂದ ಸಹಜವಾಗಿ ಉತ್ತಮ ಇಳುವರಿ ಬರುತ್ತಿತ್ತು. ಆದರೆ ಈಗ ವಾಣಿಜ್ಯ ಬೆಳೆ ಮಾತ್ರವಲ್ಲದೆ ಆಹಾರ ಬೆಳೆಗಳ ಬೀಜ ಬಿತ್ತನೆಯೂ ಕೂಡ ಕಾರ್ಪೋರೇಟ್ ಕಂಪೆನಿಗಳ ಹಿಡಿತದಲ್ಲಿದೆ. ಬೀಜ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಕಾರ್ಪೋರೇಟ್ ಕಂಪೆನಿಗಳು ಬೀಜಗಳ ಮರು ಉತ್ಪಾದನೆಯ ಸಾಮರ್ಥ್ಯವನ್ನೇ ನಾಶಪಡಿಸಿರುವುದು ದುರಂತ ಎಂದವರು ವಿಷಾದಿಸಿದರು.

ಬೇರೆ ಬೇರೆ ಕ್ಷೇತ್ರಗಳಲ್ಲಿ ಅದರ ಉತ್ಪಾದಕರೇ ಅವರ ಶ್ರಮಕ್ಕೆ ಬೆಲೆ ಕ್ಟ್ಟಲು ಅವಕಾಶಗಳಿವೆ. ಆದರೆ ಕೃಷಿ ಕ್ಷೇತ್ರದಲ್ಲಿ ಕೃಷಿಕನ ಹಕ್ಕನ್ನು ಕಸಿದುಕೊಂಡಿರುವ ಕಾರ್ಪೋರೇಟ್ ಕಂಪೆನಿಗಳೇ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸುತ್ತವೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಗಳು ಎಂದೂ ರೈತರ ಪರವಾಗಿಲ್ಲ. ರೈತರ ಪರವಾಗಿರಬೇಕಾದ ಕೃಷಿ ವಿವಿಗಳು ಇಂದು ಬಂಡವಾಳ ನೀಡುವ ಕಾರ್ಪೋರೇಟ್ ವಲಯದ ಪರವಾಗಿ ರುವುದು ಅತ್ಯಂತ ದೊಡ್ಡ ದುರಂತ. ಇದರಿಂದ ರೈತರು ಈ ವಿವಿಗಳ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳು ವಂತಾಗಿದೆ ಎಂದು ಸಾಯಿನಾಥ್ ನುಡಿದರು.

ರೈತರ ಆತ್ಮಹತ್ಯೆ:  2011ರ ಗಣತಿಯಲ್ಲಿ ತಿಳಿದುಬಂದ ಒಂದು ಮಹತ್ವದ ಅಂಶವೆಂದರೆ ದೇಶದಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಇಳಿಮುಖ ವಾಗುತ್ತಿರುವುದು. 150 ಲಕ್ಷ ರೈತರು ಜಮೀನು ಕಳೆದುಕೊಂಡು ಕೃಷಿ ಕಾರ್ಮಿಕ ರಾಗಿ ಬದಲಾಗಿದ್ದಾರೆ. ಪ್ರತಿ ದಿನ 2,000 ರೈತರು ಕೃಷಿಯಿಂದ ವಿಮುಖ ರಾಗುತಿತಿದ್ದಾರೆ. ದೇಶದಲ್ಲಿ 1991ರಿಂದ 2017ರವರೆಗಿನ ಅವಧಿಯಲ್ಲಿ 3.15 ಲಕ್ಷ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇದರಲ್ಲಿ ಮಹಿಳಾ ಕೃಷಿಕರು, ಪಟ್ಟ ಜಾಗದಲ್ಲಿ ಹೆಸರಿರದ ಕೃಷಿಕರ ಆತಹತ್ಯೆ ಪ್ರಕರಣಗಳನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಕೃಷಿಕರ ಈ ಮಟ್ಟಿಗಿನ ಸಾವಿಗೆ ಕಾರಣ ಕಾರ್ಪೋರೇಟ್ ವಲಯದ ಪ್ರಾಬಲ್ಯ ಎಂದು ಅವರು ಬಣ್ಣಿಸಿದರು.

2011ರ ಗಣತಿಯಲ್ಲಿ ತಿಳಿದುಬಂದ ಒಂದು ಮಹತ್ವದ ಅಂಶವೆಂದರೆ ದೇಶದಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಇಳಿಮುಖ ವಾಗುತ್ತಿರು ವುದು. 150 ಲಕ್ಷ ರೈತರು ಜಮೀನು ಕಳೆದುಕೊಂಡು ಕೃಷಿ ಕಾರ್ಮಿಕ ರಾಗಿ ಬದಲಾಗಿದ್ದಾರೆ. ಪ್ರತಿ ದಿನ 2,000 ರೈತರು ಕೃಷಿಯಿಂದ ವಿಮುಖ ರಾಗುತಿತಿದ್ದಾರೆ. ದೇಶದಲ್ಲಿ 1991ರಿಂದ 2017ರವರೆಗಿನ ಅವಧಿಯಲ್ಲಿ 3.15 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮಹಿಳಾ ಕೃಷಿಕರು, ಪಟ್ಟ ಜಾಗದಲ್ಲಿ ಹೆಸರಿರದ ಕೃಷಿಕರ ಆತಹತ್ಯೆ ಪ್ರಕರಣಗಳನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಕೃಷಿಕರ ಈ ಮಟ್ಟಿಗಿನ ಸಾವಿಗೆ ಕಾರಣ ಕಾರ್ಪೋರೇಟ್ ವಲಯದ ಪ್ರಾಬಲ್ಯ ಎಂದು ಅವರು ಬಣ್ಣಿಸಿದರು. ಭಾರತದಲ್ಲಿ ಜಾರಿಯಾದ ಉದಾರೀಕರಮ ನೀತಿಯ ಬಳಿಕ ದೇಶದ ಕೃಷಿ ವಲಯ ಹಾಗೂ ರೈತಾಪಿ ವರ್ಗ ದೈನೇಸಿಸ್ಥಿತಿಗೆ ಬಂದು ತಲುಪಿದೆ. ಸ್ವಾವಲಂಬಿ ಗಳಾಗಿ ಬದುಕಿದ್ದ ರೈತರು ಇಂದು ಪರಾವಂಬಿ ಗಳಾಗಿದ್ದಾರೆ. ಬೀಜ, ರಸಗೊಬ್ಬರ ಸೇರಿದಂತೆ ರೈತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ರೈತರ ಆದಾಯ ಮಾತ್ರ ಏರಿಕೆ ಯನ್ನೇ ಕಾಣುತ್ತಿಲ್ಲ. 2022ರಲ್ಲಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ತಮ್ಮ ಹೇಳಿಕೆಯನ್ನೇ ಮರೆತು ಬಿಟ್ಟಿದ್ದಾರೆ. ರೈತರ ಈ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಕಾರ್ಪೋರೇಟ್ ವಲಯದ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಬೇಕಾಗಿದೆ ಎಂದರು.

ಗ್ರಾಮೀಣ ಭಾಗದ ರೈತರ ಪರವಾಗಿ ನಿಲ್ಲಬೇಕಾದ ನಬಾರ್ಡ್ ಸಂಸ್ಥೆಯ ಅನುದಾನಗಳು ಕೃಷಿಕರ ಬದಲು ಕೃಷಿ ವ್ಯಾಪಾರಕ್ಕೆ ವಿನಿಯೋಗ ವಾಗುತ್ತಿದೆ. ಸ್ವಾಮಿನಾಥನ್ ಆಯೋಗದ ವರದಿಯ ಅನುಷ್ಠಾನದ ಕುರಿತ ಹೇಳಿಕೆಯಲ್ಲಿ ಅಧಿಕಾರಶಾಹಿಗಳಲ್ಲೇ ಸ್ವಷ್ಟತೆ ಇಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಅಮಿಷಕ್ಕೆ ಬಲಿಯಾಗಿ ಬದುಕನ್ನೆ ಕಳೆದುಕೊಳ್ಳುತ್ತಿರುವ ದೇಶದ ಕೃಷಿಕರ ಪರಿಸ್ಥಿತಿ ಬದಲಾಗಬೇಕು ಎಂದರು.

ರೈತರು ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನಾವಳಿಗಳು ನಿರಂತರವಾಗಿ ನಡೆಯುತ್ತಿರುವ ನಡುವೆಯೇ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾಪಗಳು ಜೋರಾಗಿ ಕೇಳಿಬರುತ್ತಿವೆ. ಇದರಿಂದ ಸಾಮಾನ್ಯ ರೈತ ಹಾಗೂ ಕೃಷಿಕರ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಲೂ ಕಷ್ಟವಾಗುತ್ತಿದೆ ಎಂದು ಮುಂದಿನ ಭಯಾನಕ ದಿನಗಳ ಚಿತ್ರವನ್ನು ತೆರೆದಿಟ್ಟರು.

ಕೆಲ ವರ್ಷಗಳ ಹಿಂದೆ ಮೆಕ್ಸಿಕೊ-ಬ್ರೆಜಿಲ್‌ನಂಥ ದೇಶಗಳಲ್ಲಿ ವೆನಿಲಾ ಇಳುವರಿ ಕಡಿಮೆಯಾಗಿದ್ದರಿಂದ ಕೇರಳ ಹಾಗೂ ಮಂಗಳೂರು ಭಾಗದಲ್ಲಿ ಕೃಷಿಕರಿಗೆ ಒಳ್ಳೆಯ ಆದಾಯ ಬಂದಿತ್ತು. ಆದರೆ ಈ ಪರಿಸ್ಥಿತಿ ಬಹಳ ದಿನ ಉಳಿಯಲಿಲ್ಲ. ಗಗನಕ್ಕೆ ಏರಿದ್ದ ಬೆಲೆ ಪಾತಾಳಕ್ಕೆ ಕುಸಿದ ಕಾರಣ ದಿಂದ ಎಷ್ಟೋ ಕೃಷಿಕರು ಆತ್ಮಹತ್ಯೆ ಮಾಡಿಕೊಂಡ, ಎಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ನಮ್ಮ ಮುಂದಿದೆ. ಕೃಷಿಕರು ಕೂಡ ಒಂದು ಅಥವಾ ಎರಡು ಋತುವಿಗಿಂತ ಹೆಚ್ಚಿನ ಸಲ ಒಂದೇ ವಾಣಿಜ್ಯ ಬೆಳೆಗಳನ್ನು ಬೆಳೆಸಬಾರದು ಎನ್ನುವ ಪಾಠವನ್ನು ಇದರಿಂದ ಕಲಿಯಬೇಕಿದೆ ಎಂದು ಪಿ.ಸಾಯಿನಾಥ್ ನಾಡಿನ ಕೃಷಿಕರಿಗೆ ಕಿವಿಮಾತು ಹೇಳಿದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ರಾಜಾರಾಂ ತಲ್ಲೂರ್, ಎಲ್.ಎನ್. ತಲ್ಲೂರು, ಸಮುದಾಯ ಸಂಘಟನೆಯ ಜಿ.ವಿ.ಕಾರಂತ್, ಬಾಲಕೃಷ್ಣ, ಉದಯ್ ಗಾಂವ್ಕರ್, ಸದಾನಂದ ಬೈಂದೂರು, ಪತ್ರಕರ್ತ ಎ.ರಾುಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.

ಸಮುದಾಯ ಕಲಾವಿದರು ರೈತ ಗೀತೆ ಹಾಡಿದರು. ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ರಚಿಸಿದ ಪಿ.ಸಾಯಿನಾಥ ಅವರ ಕ್ಯಾರಿಕೇಚರನ್ನು ಸಾಯಿನಾಥ ಅವರಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News