ದುಬೈಯಿಂದ ಹೊರಟು ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಇಳಿದದ್ದು ಬೆಂಗಳೂರಿನಲ್ಲಿ!

Update: 2020-02-15 09:13 GMT

ಮಂಗಳೂರು, ಫೆ.15: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಕಾರಣ ದಟ್ಟ ಮಂಜು ಕವಿದ ವಾತಾವರಣ. 

ಮುಂಜಾನೆ ಏಳು ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ಪರಿಸರದಲ್ಲಿ ದಟ್ಟ ಮಂಜು ಕವಿದ ವಾತಾವರಣವಿತ್ತು.‌ ದಟ್ಟ ಮಂಜಿನ ಪರಿಣಾಮ ಮಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ಮತ್ತು ಲ್ಯಾಂಡಿಂಗ್ ಆಗುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ.

ದುಬೈನಿಂದ ಬಂದ ವಿಮಾನ ಮಂಗಳೂರಿನಲ್ಲಿ ಇಳಿಯಲಾಗದೆ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಬೆಂಗಳೂರಿನಿಂದ ಬರಬೇಕಾಗಿದ್ದ ವಿಮಾನವು ವಿಳಂಬವಾಗಿ ಮಂಗಳೂರಿಗೆ ಬಂದಿದೆ.

ಸಚಿವ ಸುರೇಶ್ ಕುಮಾರ್ ಅವರು ಮಂಗಳೂರಿಗೆ ಬರಬೇಕಿದ್ದ ವಿಮಾನವು ತಡವಾಗಿ ಆಗಮಿಸಿದೆ. ಈ ಕುರಿತು ಸಚಿವರು ಟ್ವೀಟ್ ಮಾಡಿದ್ದು, ತಾನು ಮಂಗಳೂರಿಗೆ ಹೋಗಬೇಕಾದ Spicejet ವಿಮಾನ ಒಂದೂವರೆ ಗಂಟೆ ತಡವಾಗಿ ಹೊರಟಿದೆ. ಇದಕ್ಕೆ ಮಂಗಳೂರಿನಲ್ಲಿದ್ದ ವಿಪರೀತ ಮಂಜು ಕವಿದ ವಾತಾವರಣ ಎಂದು ಉಲ್ಲೇಖಿಸಿದ್ದಾರೆ.

 ಬೆಳಗ್ಗೆ 10:30ರ ಬಳಿಕ ವಿಮಾನ ನಿಲ್ದಾಣ ಪರಿಸರದಲ್ಲಿ ವಾತಾವರಣ ತಿಳಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News