ಮಣಿಪಾಲ: ಮದ್ಯ ವ್ಯಸನಿಗಳ ಮಕ್ಕಳ ಕುರಿತು ಚಿತ್ರಕಲಾ ಸ್ಪರ್ಧೆ

Update: 2020-02-15 13:56 GMT

ಮಣಿಪಾಲ, ಫೆ.15: ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ-ಮಣಿಪಾಲ, ಐಎಂಎ ಉಡುಪಿ ಕರಾವಳಿ ಶಾಖೆಯ ಸಹಯೋಗದಲ್ಲಿ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಮದ್ಯ ವ್ಯಸನಿಗಳ ಮಕ್ಕಳು, ಕುಟುಂಬ ಮತ್ತು ಸಮಾಜದ ಕುರಿತು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಮಣಿಪಾಲ ತ್ರಿವರ್ಣ ಕಲಾ ಶಾಲೆ ಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಮಣಿಪಾಲ ರೋಟರಿ ಕ್ಲಬ್‌ನ ಅಧ್ಯಕ್ಷ ರವಿವರ್ಮ ಅರಿಗ ಮಾತನಾಡಿ, ಸಮಾಜದಲ್ಲಿ ಒಳ್ಳೆದು ಮತ್ತು ಕೆಟ್ಟದ್ದನ್ನು ತಿಳಿದುಕೊಂಡು ಮದ್ಯವ್ಯಸನದ ದುಶ್ಚಟದಿಂದ ದೂರವಿಡಲು ಇಂತಹ ಸ್ಪರ್ಧೆಗಳು ಜಾಗೃತಿ ಮೂಡಿಸುತ್ತದೆ ಹಾಗೂ ಉತ್ತಮ ನಾಗರಿಕರಾಗಿ ಬೆಳೆದು ಸೇವಾ ಕಾರ್ಯವನ್ನು ಮಾಡಿಸುವತ್ತ ಒಲವು ಮೂಡಲು ಸಾ ಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ರೋಟರಿ ಕ್ಲಬ್ ಎಡಿಶನಲ್ ಕಮ್ಯುನಿಟಿ ಸರ್ವೀಸ್‌ನ ನಿರ್ದೇಶ ರವಿ ಕಾರಂತ, ಕಲಾಕೇಂದ್ರದ ನಿರ್ದೇಶಕ ಹರೀಶ್ ಸಾಗಾ, ಶಿಕ್ಷಕಿ ಸುಮಂಗಲಾ ಉಪಸಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News