​ಉಡುಪಿ: ಫೆ.19ರಂದು ‘ನಿವೃತ್ತರ ನಡೆ ವಿಧಾನಸೌಧದ ಕಡೆ’

Update: 2020-02-15 14:30 GMT

ಉಡುಪಿ, ಫೆ.15: 6ನೇ ವೇತನ ಆಯೋಗದ ಶಿಫಾರಸು ಸೇರಿದಂತೆ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಎಂಟು ಅಂಶದ ಬೇಡಿಕೆಗಳನ್ನು ಈ ಬಾರಿಯ ಮುಂಗಡ ಪತ್ರದಲ್ಲಿ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ಇದೇ ಫೆ.19ರಂದು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘ ‘ನಿವೃತ್ತರ ನಡೆ ವಿಧಾನಸೌಧದ ಕಡೆ’ ಎಂಬ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೇಡಿಕೆಗಳು: ನಗದು ರಹಿತ ಜ್ಯೋತಿ ಸಂಜೀವಿನಿ ವ್ಯೆದ್ಯಕೀಯ ಸೌಲಭ್ಯ, ನೆರೆಯ ರಾಜ್ಯದಲ್ಲಿರುವಂತೆ 70 ವರ್ಷದಿಂದ ಪ್ರಾರಂಭಿಸಿ 5 ವರ್ಷಕ್ಕೊಮ್ಮೆ ಮೂಲನಿವೃತ್ತಿ ವೇತನದಲ್ಲಿ ಹೆಚ್ಚಳ, ರಾಜ್ಯ ಸಾರಿಗೆಯಲ್ಲಿ ಶೇ.25ರ ಬದಲು ಶೇ.50ರಷ್ಟು ರಿಯಾಯಿತಿ, ನಿವೃತ್ತರ ಅಂತ್ಯಸಂಸ್ಕಾರದ ಭತ್ಯೆ, ಸಂಘಗಳಿಗೆ ನಿವೇಶನ ಮಂಜೂರಾತಿ, ಆದಾಯ ತೆರಿಗೆ ವಿನಾಯಿತಿಗೆ ಕೇಂದ್ರಕ್ಕೆ ಶಿಫಾರಾಸು, ನಿವೃತ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲ ಮಂಜುರಾತಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿವೃತ್ತರಿಗಾಗಿ ಪ್ರತ್ಯೇಕ ಸಾಲಿಗಾಗಿ ಶಿಫಾರಸು.
ಸಂಘದ ಈ ಎಂಟು ಬೇಡಿಕೆಗಳನ್ನು ಮುಂಗಡಪತ್ರದಲ್ಲಿ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ನಿವೃತ್ತರ ರಾಜ್ಯ ಸಂಘ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ ನಿವೃತ್ತ ನೌಕರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಎಸ್. ತೋನ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News