​ಡಾ.ರಾಜೇಂದ್ರ ಚೆನ್ನಿ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ

Update: 2020-02-15 17:00 GMT

ಉಡುಪಿ, ಫೆ.15: ಖ್ಯಾತ ವಿಮರ್ಶಕ ಪ್ರೊ. ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ ಇವರ ‘ಆಯ್ದ ವಿಮರ್ಶಾ ಕೃತಿಗಳು’ ಪುಸ್ತಕ 2019ರ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.

ರಾಜೇಂದ್ರ ಚೆನ್ನಿ ಶಿವಮೊಗ್ಗ ಕುವೆಂಪು ವಿವಿಯ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. 2009ನೇ ಸಾಲಿನ ಪ್ರತಿಷ್ಠಿತ ಜಿಎಸ್‌ಎಸ್ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಡಾ. ಚೆನ್ನಿ, ಶಿವಮೊಗ್ಗೆಯ ಮಾನಸ ಸೆಂಟರ್ ಪಾರ್ ಕಲ್ಚರಲ್ ಸ್ಟಡೀಸ್ ಇದರ ನಿರ್ದೇಶಕರಾಗಿದ್ದಾರೆ. ಇದೇ ಫೆ.27ರಂದು ಎಂಜಿಎಂ ಕಾಲೇಜಿನ ವಾರ್ಷಿಕ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಡಾ. ರಾಜೇಂದ್ರ ಚೆನ್ನಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾುವುದು ಎಂದು ಪ್ರಕಟಣೆ ತಿಳಿಸಿದೆ.

ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ, ಮಾಸ್ತಿ ಕತೆಗಳು: ಒಂದು ಅಧ್ಯಯನ, ನಡುಹಗಲಿನಲ್ಲಿ ಕಂದೀಲು ಗಳು (ವಿಮರ್ಶೆ), ದೊಡ್ಡ ಮರ, ಕರುಳ ಬಳ್ಳಿಯ ಸೊಲ್ಲು, ಮಳೆಯಲ್ಲಿ ಬಂದಾತ ಇವರ ಕಥಾ ಸಂಕಲನಗಳು, ಸ್ಟೀಕಿಂಗ್ ಪಾರ್ ಸಮ್‌ಒನ್, ಆಪ್ ಮೆನಿ ವರ್ಲ್ಡ್ (ವಿಮರ್ಶೆ) ಮಡ್‌ಟೌನ್ (ಕಾದಂಬರಿ), ಅಲ್ಲದೇ ಟ್ರೆಡಿಷನ್ಸ್ ಆಪ್ ಮಾಡರ್ನಿಟಿ: ಎ ಕಂಪಾರೇಟೀವ್ ಸ್ಟಡೀಸ್ ಆಪ್ ಟಿ.ಎಸ್. ಎಲಿಯೆಟ್ ಆಂಡ್ ಗೋಪಾಲಕೃಷ್ಣ ಅಡಿಗ ಇವರ ಪ್ರಮುಖ ಇಂಗ್ಲಿಷ್ ಕೃತಿಗಳಾಗಿವೆ. ಇವರ ಮೊದಲ ವಿಮರ್ಶಾ ಕೃತಿ ಅಧ್ಯಯನಕ್ಕೆ 1987ರಲ್ಲಿ ಹಾಗೂ ಅಮೂರ್ತತೆ ಮತ್ತು ಪರಿಸರ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News