ಎಸ್‌ಐಒ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2020-02-15 17:55 GMT

ಬೆಂಗಳೂರು. ಫೆ.15: ವಿಶ್ವ ವಿದ್ಯಾರ್ಥಿ ದಿನದ ಪ್ರಯುಕ್ತ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ಕರ್ನಾಟಕ ರಾಜ್ಯ ಘಟಕವು ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್‌ಡಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶವು ಪ್ರಕಟಗೊಂಡಿದೆ.

ಪ್ರಥಮ ಬಹುಮಾನ 10,000 ರೂ.ನಗದು, ದ್ವಿತೀಯ ಬಹುಮಾನ 7,000ರೂ, ತೃತೀಯ ಬಹುಮಾನ 5,000 ರೂ.ನಗದು ಮತ್ತು ಪ್ರಮಾಣ ಪತ್ರವನ್ನು ಹೊಂದಿದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಕಥೆಗಳಿಗೆ ಬಹುಮಾವನ್ನು ನೀಡಲಾಗುವುದು.

ಪ್ರಥಮ ಬಹುಮಾನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಪ್ರಹ್ಲಾದ ಡಿ.ಎಂ ಅವರ ‘ಹೈನೋರ ಹೊಲ’ ಕನ್ನಡ ಕಥೆ, ದ್ವಿತೀಯ ಬಹುಮಾನಕ್ಕೆ ಮಂಗಳೂರಿನ ರೊಶನಿ ನಿಲಯದ ಸ್ಕೂಲ್ ಆಫ್ ಸೊಶೀಯಲ್ ವರ್ಕ್‌ನ ಪದವಿ ವಿದ್ಯಾರ್ಥಿನಿ ಝಹ್‌ರ ಫಾತಿಮಾ ಅವರ ‘ಚಾರ್ಡ್’ ಇಂಗ್ಲಿಷ್ ಕಥೆ, ತೃತೀಯ ಬಹುಮಾನಕ್ಕೆ ಬೆಂಗಳೂರಿನ ಸರಕಾರಿ ಯುನಾನಿ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿ ಆನಮ್ ತಸ್ಮೀಯಾ ಅವರ ‘ತಾಹಿರಾಕೆ ಜಝ್ಬಾತ್’ ಉರ್ದು ಕಥೆ ಆಯ್ಕೆಯಾಗಿದೆ.

ಉಡುಪಿ ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ವೆಂಕಟೇಶ್ ಪ್ರಸಾದ್ ರಾಮಕೃಷ್ಣ ಹೆಗ್ಡೆ ಬರೆದಿರುವ ‘ಸಿದ್ದಿ ಬೊಂಡ್ಯಾ’, ಅಳ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರವಿ ಉ.ಕಂಬಳಿ ಅವರ ‘ಆ ಕರಾಳ ಘಟನೆ’, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಶಿವರಂಜಿನಿ ಎ. ಬರೆದಿರುವ ‘ಔದಾರ್ಯದ ಕಣ್ಣು’, ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿನಿ ಲಾವಣ್ಯಾ ಕೆಎಸ್ ಅವರ ‘ಹೊಲಿಗೆ’ ಕನ್ನಡ ಕಥೆಗಳು ಹಾಗೂ ಗುಲ್ಬರ್ಗಾದ ಎಂಆರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಅಬ್ದುಲ್ ಅಝೀಝುದ್ದೀನ್ ಅವರ ‘ದಿ ಕಲರ್ ಆಫ್ ಜಸ್ಟಿಸ್, ಉಡುಪಿ ಶ್ರೀ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಪಿ.ಶೆಟ್ಟಿ ಅವರ ‘ಗ್ರೇಸಸ್ ಆಫ್ ದಿ ವರ್ಲ್ಡ್’ ಇಂಗ್ಲಿಷ್ ಕಥೆಗಳು ಮತ್ತು ಗುಲ್ಬರ್ಗಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್‌ನ ವಿದ್ಯಾರ್ಥಿ ಮುಹಮ್ಮದ್ ಅಂಜುಮ್ ಇಲ್ಯಾಸ್ ಖುರೇಷಿ ಅವರ ‘ಝರಾನಂ ಹೋತೋ ಯೇ ಮಿಟ್ಟಿ ಬಡೀ ಝರ್‌ಕೈಸ್ ಹೈ ಸಾಕಿ’ ಉರ್ದು ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ ಕುಕ್ಕಿಲ, ಅನುಪಮ ಪತ್ರಿಕೆಯ ಉಪಸಂಪಾದಕಿ ಶಾಹಿದಾ ಉಮರ್, ಅಜೀಂ ಪ್ರೇಮ್ಜೀ ವಿವಿಯ ಫ್ಯಾಕಲ್ಟಿ ಮುಜಾಹಿದುಲ್ ಇಸ್ಲಾಮ್, ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಇದರ ಕಾರ್ಯದರ್ಶಿ ಎಂ.ಡಿ ಚೆಂಡಾಡಿ, ಎಸ್‌ಐಒ ಕಾರ್ಯದರ್ಶಿ ಆಸಿಮ್ ಜವಾದ್ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News