ಸಹ್ಯಾದ್ರಿಯಲ್ಲಿ ‘ಜಿಪಿಎಲ್ ಉತ್ಸವ 2020’ಕ್ಕೆ ಚಾಲನೆ

Update: 2020-02-15 17:58 GMT

ಮಂಗಳೂರು, ಫೆ.15: ರಾಜ್ಯ, ದೇಶ, ವಿದೇಶಗಳಲ್ಲಿರುವ ಜಿಎಸ್‌ಬಿ ಸಮುದಾಯದ ಸರ್ವರನ್ನು ಒಗ್ಗೂಡಿಸುವ ‘ಜಿಪಿಎಲ್ 2020 ಕ್ರೀಡೋತ್ಸವ’ಕ್ಕೆ ನಗರ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶಾಸಕ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೇದವ್ಯಾಸ ಕಾಮತ್ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು 18 ವರ್ಷಗಳ ಹಿಂದೆ ಪ್ರಾರಂಭವಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅಸಹಾಯಕರ ಆರೋಗ್ಯ ಖರ್ಚಿಗೆ ನೆರವು ನೀಡುತ್ತಾ ಬಂದಿದೆ. ಕಳೆದ 4 ವರ್ಷಗಳಿಂದ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಯೂತ್ ಆಫ್ ಜಿಎಸ್‌ಬಿ ಸಂಘಟನೆಯು ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಮಹಿಳೆಯರಿಗಾಗಿ, ಮಕ್ಕಳಿಗಾಗಿ ಮತ್ತು ಸಮಾಜದಲ್ಲಿ ಅದ್ವೀತಿಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಯುವ ಜನರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ರಘುನಂದನ್ ಕಾಮತ್, ಮನೋಹರ್ ಕಾಮತ್, ಸತೀಶ್ ನಾಯಕ್, ಮುಂಡ್ಕೂರು ರಾಮದಾಸ್ ಕಾಮತ್, ಪ್ರಿಯಾ ನಾಗೇಂದ್ರ ಪೈ, ನಿತ್ಯಾನಂದ ಪೈ, ವರದರಾಜ್ ಪೈ, ರಾಜೇಶ್ ಕಿಣಿ, ಪ್ರದೀಪ್ ಪೈ, ನೀರಜ್ ಭಂಡಾರಿ, ರಾಘವೇಂದ್ರ ಕುಡ್ವ, ಪುತ್ತೂರು ನರಸಿಂಹ ನಾಯಕ್, ಪ್ರಶಾಂತ್ ರಾವ್, ಜಗನ್ನಾಥ್ ಕಾಮತ್, ವಿಜೇಂದ್ರ ಭಟ್, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು.
ಕಿರಣ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಕಾಮತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News