ಜೋಶ್ನಾ ಮುಡಿಗೆ 18ನೇ ರಾಷ್ಟ್ರೀಯ ಪ್ರಶಸ್ತಿ

Update: 2020-02-15 18:16 GMT

ಚೆನ್ನೈ, ಫೆ.15: ಐಎಸ್‌ಎ ಅಂಗಣದಲ್ಲಿ ನಡೆದ 77ನೇ ಆವೃತ್ತಿಯ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಜೋಶ್ನಾ ಚಿನ್ನಪ್ಪ ಹಾಗೂ ಸೌರವ್ ಘೋಷಾಲ್ ಪ್ರಾಬಲ್ಯ ಮೆರೆದರು. ಈ ಇಬ್ಬರು ಕ್ರಮವಾಗಿ 18ನೇ ಹಾಗೂ 13ನೇ ಬಾರಿ ರಾಷ್ಟ್ರ ಪ್ರಶಸ್ತಿ ಜಯಿಸಿದರು. ಅಗ್ರ ಶ್ರೇಯಾಂಕದ ಚಿನ್ನಪ್ಪ ಫೈನಲ್‌ನಲ್ಲಿ ತನ್ವಿ ಖನ್ನಾರನ್ನು 8-11, 11-6, 11-4, 11-7 ಸೆಟ್‌ಗಳ ಅಂತರದಿಂದ ಮಣಿಸಿದರು. ಕಳೆದ ವರ್ಷ ಪುಣೆಯಲ್ಲಿ ದಾಖಲೆ 16ನೇ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದ ಚಿನ್ನಪ್ಪ ಅವರು ಭುವನೇಶ್ವರಿ ಕುಮಾರ್ ಅವರ ಹೆಸರಲ್ಲಿದ್ದ ದಾಖೆ ಮುರಿದಿದ್ದರು.

ಚಿನ್ನಪ್ಪ 2000ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಕಿರೀಟ ಧರಿಸಿದ್ದರು. ಆ ಬಳಿಕ ಕೇವಲ ಎರಡು ಬಾರಿ ಮಾತ್ರ ಫೈನಲ್‌ನಲ್ಲಿ ಸೋತಿದ್ದರು. ಪುರುಷರ ಸಿಂಗಲ್ಸ್ ನಲ್ಲಿ ಸೌರವ್ ಘೋಷಾಲ್ ಯುವ ಆಟಗಾರ ಅಭಿಷೇಕ್ ಪ್ರಧಾನ್‌ರನ್ನು 11-6, 11-5, 11-6 ಅಂತರದಿಂದ ಮಣಿಸಿದರು. ಈ ಮೂಲಕ ಮತ್ತೊಮ್ಮೆ ಪ್ರಶಸ್ತಿ ಜಯಿಸಿದರು. ಹಿರಿಯ ಆಟಗಾರ ಸೌರವ್ ಫೈನಲ್‌ನಲ್ಲಿ ಎದುರಾಳಿಗೆ ಸ್ವಲ್ಪವೂ ಅವಕಾಶ ಬಿಟ್ಟುಕೊಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News