​ಎಸ್‌ಐಒ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2020-02-15 18:49 GMT

ಮಂಗಳೂರು, ಫೆ.15: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ದ.ಕ. ಘಟಕ ಮತ್ತು ಭಾರತ್ ಸೋಶಿಯಲ್ ವೆಲ್ಫೇರ್ ಅಸೋಶಿಯೇಶನ್‌ನ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನ ವಿದ್ಯಾರ್ಥಿನಿ ಸುಹಾನಾ ಸಫರ್ ಪ್ರಥಮ, ಮಲಪ್ಪುರಂ ಸೆಂಟರ್‌ನ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿ ನಿಹಾಲ್ ದ್ವಿತೀಯ, ಮಂಗಳೂರು ಸರಕಾರಿ ಬಿಎಡ್ ಕಾಲೇಜಿನ ವಿದ್ಯಾರ್ಥಿ ಕೀರ್ತಿ ತೃತೀಯ ಬಹುಮಾನ ಪಡೆದಿದ್ದಾರೆ.

ಕಾಸರಗೋಡಿನ ಕೌಸರಿ ವಿದ್ಯಾಲಯದ ಎ.ಎಸ್ ಮುಂಡಾಡಿ,ಮಂಗಳೂರು ವಿವಿ ಕಾಲೇಜಿನ ಶ್ವೇತಾ, ಮೇರಮಜಲು ನಿತ್ಯ ಸಾಹಿ ಹೈಸ್ಕೂಲ್‌ನ ಕಾವ್ಯಾ, ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ಸಂಬ್ರೀನಾ, ಗದಗದ ಗಜೇಂದ್ರಗಡ ಸರಕಾರಿ ಕಾಲೇಜಿನ ಹುಸ್ಸೇನಾಬಿ ಕೊಪ್ಪಳ, ಮಂಗಳೂರು ಬಿಎಡ್ ಸರಕಾರಿ ಕಾಲೇಜಿನ ಶಮೀನಾ ಅವರ ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜೇತರಿಗೆ ಎಂ.ಸಿ. ಇಸ್ಮಾಯಿಲ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಥಮ 2,000 ರೂ., ದ್ವಿತೀಯ 1,500 ರೂ, ತೃತೀಯ 1,000 ರೂ. ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಪ್ರಬಂಧಗಳಿಗೆ 500 ರೂ. ನಗದು , ಪ್ರಶಸ್ತಿ ಫಲಕ ಹಾಗೂ ಪುಸ್ತಕ ಒಳಗೊಂಡಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪುಸ್ತಕ ನೀಡಲಾಗುವುದು ಎಂದು ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ಅಶೀರುದ್ದೀನ್ ಮಂಜನಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News