ಭಟ್ಕಳ: ಪುಲ್ವಾಮ ದಾಳಿಗೆ ಒಂದು ವರ್ಷ; ಹುತಾತ್ಮ ಸೈನಿಕರ ಸ್ಮರಣೆ

Update: 2020-02-15 18:58 GMT

ಭಟ್ಕಳ: ಪುಲ್ವಾಮ ದಾಳಿಗೆ ಒಂದು ವರ್ಷ ಗತಿಸಿದ್ದು, ೪೦ ಸೈನಿಕರು ಹುತಾತ್ಮರಾಗಿದ್ದನ್ನು ಸ್ಮರಿಸಲು ಇಲ್ಲಿನ ಯೂತ್ಸ್ ಆಫ್ ಭಟ್ಕಳ ವತಿಯಿಂದ ಶುಕ್ರವಾರ ರಾತ್ರಿ ಪ್ರವಾಸಿ ಬಂಗ್ಲೆಯ ಎದುರು ಮೇಣದ ಬತ್ತಿಗಳು ಉರಿಸುವುದರ ಮೂಲಕ ಹುತಾತ್ಮರ ಆತ್ಮಕ್ಕೆ ಶಾಂತಿಯನ್ನು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾವಾದಿ ಇನಾಮ್ ಶೇಕ್ ಪುಲ್ವಾಮ ಘಟನೆ ದೇಶ ಮರೆತಿಲ್ಲ. ಸಂತೃಸ್ತರ ಕುಟುಂಬಕ್ಕೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬ ವರದಿಗಳು ಪತ್ರಿಕೆಗಳಲ್ಲಿ ಬರುತ್ತಿದ್ದು ರಾಷ್ಟ್ರರಕ್ಷಕರ ಕುಟುಂಬದ ರಕ್ಷಣೆಗೆ ಸರ್ಕಾರ ಮುಂದೆ ಬರಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಘಟನೆಯ  ತನಿಖೆ ಕುರಿತಂತೆ ಇದುವರೆಗೆ ಯಾವುದೇ ಬೆಳವಣೆಗೆಯಾಗಿಲ್ಲ. ಒಂದು ವರ್ಷ ಕಳೆದರೂ ಇನ್ನೂ ತನಿಖೆ ಸಂಪೂರ್ಣಗೊಂಡಿಲ್ಲ. ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೆಲಸ ಮಾಡುತ್ತಿರುವುದಾಗಿ ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಇಮ್ರಾನ್ ಆರ್ಟ್ಸ, ಮುಅಝ್ಝಿಝ್ ಕೋಲಾ, ಮಿಸ್ಬಾ ಶೇಖ್ ಸೇರಿದಂತೆ ನೂರಾರು ಯುವಕರು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News