ಬೆಳ್ಳಾರೆ: ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಅಂಗಡಿಗೆ ಬೆಂಕಿ; 3 ಆರೋಪಿಗಳ ಬಂಧನ

Update: 2020-02-16 06:04 GMT

ಸುಳ್ಯ, ಫೆ.16: ಶಾಲಾ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿತ ವ್ಯಕ್ತಿಗೆ ಸೇರಿದ ಅಂಗಡಿಗೆ ಕಿಡಿಗೇಡಿಗಳು ಬೆಂಕಿಹಚ್ಚಿ ಧ್ವಂಸಗೊಳಿಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕುದ್ಮಾರಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 
5ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿತ ಆರೋಪಿ, ಇಲ್ಲಿನ ನಿವಾಸಿ ಅಬ್ದುಲ್ಲಾ ಎಂಬಾತನಿಗೆ ಸೇರಿದ ಗೂಡಂಗಡಿ ಇದಾಗಿದೆ. ಅಬ್ದುಲ್ಲಾ ಕುದ್ಮಾರು ಶಾಂತಿಮೊಗರು ತಿರುವಿನಲ್ಲಿದ್ದ ತನ್ನ ಗೂಡಂಗಡಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈಯಲು ಯತ್ನಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಈ ಸಂಬಂಧ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದರು. ಈ ನಡುವೆ ಶುಕ್ರವಾರ ರಾತ್ರಿ ಅಬ್ದುಲ್ಲಾನಿಗೆ ಸೇರಿದ ಈ ಗೂಡಂಗಡಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿತ್ತು.

ಬೆಂಕಿ ಹಚ್ಚಿದ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬರೇಪ್ಪಾಡಿ ನಿವಾಸಿಗಳಾದ ಪ್ರವೀಣ್, ಪ್ರದೀಪ್ ಮತ್ತು ಸುಧೀರ್ ಬಂಧಿತ ಆರೋಪಿಗಳಾಗಿದ್ದಾರೆ.

a

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News