ಟಿಆರ್‌ಎಫ್‌ನಿಂದ ‘ಸ್ಫೂರ್ತಿಯಾದವರೊಂದಿಗೆ ಒಂದು ದಿನ’ ಕಾರ್ಯಕ್ರಮ

Update: 2020-02-16 11:31 GMT

ಮಂಗಳೂರು, ಫೆ.16: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ಟಿಆರ್‌ಎಫ್) ವತಿಯಿಂದ ‘ಸ್ಫೂರ್ತಿಯಾದವರೊಂದಿಗೆ ಒಂದು ದಿನ’ ಕಾರ್ಯಕ್ರಮವು ನಗರದ ಕಂಕನಾಡಿಯಲ್ಲಿರುವ ಟಿಆರ್‌ಎಫ್ ಕಾನ್ಫರೆನ್ಸ್ ಹಾಲ್‌ನಲ್ಲಿ ರವಿವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ನಿತಿನ್ ಜೆ. ಶೆಟ್ಟಿ, ಕರಾವಳಿಯಲ್ಲೇ ಹೆಚ್ಚು ಯಶಸ್ವಿಯಾದ ಉದ್ಯಮಿ ಅಬ್ದುರ್ರವೂಫ್ ಪುತ್ತಿಗೆಯವರು. ಅವರು ಯಾವುದೇ ಕೆಲಸವನ್ನು ಆರಂಭಿಸಿದರೂ ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತಾರೆ. ಟಿಆರ್‌ಎಫ್ ಸಾಕಷ್ಟು ಸಂಖ್ಯೆಯ ಪ್ರತಿಭಾನ್ವಿತರಿಗೆ ಸಹಾಯ ಮಾಡಿದೆ. ಸಂಸ್ಥೆಯಿಂದ ಸಹಾಯ ಪಡೆದವರೂ ಭವಿಷ್ಯದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವಂತಾಗಲಿ ಎಂದು ಹಾರೈಸಿದರು.

ಆಝಾದ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್ ಮಾತನಾಡಿ, ಟಿಆರ್‌ಎಫ್ ಹೊಸ ಕಾರ್ಯಕ್ರಮ ಆಯೋಜಿಸುತ್ತಾ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಅಬ್ದುರ್ರವೂಫ್ ಪುತ್ತಿಗೆ ನನಗೆ ಸ್ಫೂರ್ತಿದಾಯಕರು ಎಂದು ಶ್ಲಾಘಿಸಿದರು.

* ಶ್ರೇಷ್ಠ ಸದ್ಭಾವನಾ ಪ್ರಶಸ್ತಿ: ಸಮಾಜ ಸೇವಕ ರಿಯಾಝ್ ಅಹ್ಮದ್ ಕಣ್ಣೂರು ಹಾಗೂ ಅವರ ಮಕ್ಕಳಾದ ಆಯಿಷ ನುವಾ, ಲಿಬ ಲತೀಫಾ ಅವರಿಗೆ ‘ಶ್ರೇಷ್ಠ ಸದ್ಭಾವನಾ ಪ್ರಶಸ್ತಿ’ ನೀಡಿ ಸಂಸ್ಥೆಯಿಂದ ಗೌರವಿಸಲಾಯಿತು.

* ಶ್ರೇಷ್ಠ ಯುವಕವಿ ಪ್ರಶಸ್ತಿ: ಯುವ ಬರಹಗಾರ ನಿಝಾಮ್ ಕೋಳಿಪಡ್ಪು ಅವರಿಗೆ ಟಿಆರ್‌ಎಫ್‌ನ ‘ಶ್ರೇಷ್ಠ ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

* ಸ್ಫೂರ್ತಿಯಾದವರ ಸನ್ಮಾನ: ರೂಪಾ ಶೆಣೈ, ಮನೋರಮಾ ಭಟ್, ಆಝಾದ್ ಗ್ರೂಪ್ ಆಫ್ ಕಂಪೆನೀಸ್ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್ ಅವರನ್ನು ಉದ್ಯಮಿ ಬಿ.ಅಬ್ದುಲ್ಲಾ ಸನ್ಮಾನಿಸಿ ಗೌರವಿಸಿದರು.

ಚಾರ್ಟೆಡ್ ಅಕೌಂಟೆಂಟ್ ನಿತಿನ್ ಜೆ. ಶೆಟ್ಟಿ, ಆಝಾದ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್, ಪ್ಲಾಮ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುರ್ರಝಾಕ್ ಅವರನ್ನು ಟಿಆರ್‌ಎಫ್ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ ಸನ್ಮಾನಿಸಿದರು.

ಯೋಗಗುರು ರಾಧಾಕೃಷ್ಣ ಶೆಟ್ಟಿಯವರನ್ನು ಉದ್ಯಮಿ ಎಸ್.ಎಫ್.ಮುಸ್ತಫ ಶಾಲು ಹೊದಿಸಿ, ಗೌರವಿಸಿದರು. 40 ದಿನದ ಮಗು ಇದ್ದ ಆ್ಯಂಬುಲೆನ್ಸ್‌ನ್ನು ಹನೀಫ್ ಚಲಾಯಿಸಲು ಸಹಕರಿಸಿದ ಎಸ್ಕಾರ್ಟ್ ವಾಹನದ ಚಾಲಕ ಮಾರುತಿ ಲಮಾಣಿ ಪರವಾಗಿ ಹನುಮಂತ ಅವರನ್ನು ಟಿಆರ್‌ಎಫ್ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ ಸನ್ಮಾನಿಸಿದರು.

ಗುರುಪ್ರಸಾದ್, ಆಝಾದ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್ ಅವರನ್ನು ಡಿ.ಐ.ಅಬೂಬಕರ್ ಕೈರಂಗಳ ಸನ್ಮಾನಿಸಿದರು. ಮಂಗಳೂರು ಸಂಚಾರ ಪೊಲೀಸ್ ಮುಖ್ಯ ವಾರ್ಡನ್ ಜೋಯಿ ಗೊನ್ವಾಲ್ವಿಸ್ ಅವರನ್ನು ಟಿಆರ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಫಾತಿಮಾ ತಫ್ಸೀನ ಅವರನ್ನು ಝುಲ್ಫಿಕರ್ ಖಾಸಿಂ ಸನ್ಮಾನಿಸಿದರು. ಇಬ್ರಾಹೀಂ ಮುಸ್ಲಿಯಾರ್ ಸರಪಾಡಿ ಅವರನ್ನು ಶಿಕ್ಷಕಿ ಶಾಕಿರ ಸರಪಾಡಿ ಗೌರವಿಸಿದರು. ದಯಾನಂದ ಪ್ರಭು, ಟಿಆರ್‌ಎಫ್ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ ಅವರನ್ನು ಅಬುಲ್ ಆಲಾ ಪುತ್ತಿಗೆ ಸನ್ಮಾನಿಸಿದರು. ಡಾ.ಮುಶ್ತಾಕ್ ಅವರನ್ನು ಮುಹಮ್ಮದ್ ಆಸಿಫ್ ಸನ್ಮಾನಿಸಿದರು.

ಸಿದ್ದೀಕ್ ಕರ್ನಿರೆ, ಕರ್ನಿರೆ ವಿಶ್ವನಾಥ ಶೆಟ್ಟಿಯವರನ್ನು ‘ಆಪದ್ಬಾಂಧವ ಆ್ಯಂಬುಲೆನ್ಸ್’ನ ಮುಹಮ್ಮದ್ ಆಸಿಫ್ ಸಾಣೂರು ಸನ್ಮಾನಿಸಿದರು. ಟಿಆರ್‌ಎಫ್ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆಯವರನ್ನು ಹರಿಪ್ರಸಾದ್ ಸುವರ್ಣ ಸನ್ಮಾನಿಸಿದರು.

ಕೃಷ್ಣ ಮೂಲ್ಯ, ಸೀನ ಶೆಟ್ಟಿ, ‘ವಾರ್ತಾಭಾರತಿ’ ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ಅವರನ್ನು ಹುಸೈನ್ ಬಡಿಲ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಜಯಕುಮಾರ್ ಅತ್ತಾವರ, ಮುಹಮ್ಮದ್ ರಫೀಕ್ ಅವರನ್ನು ಮುಹಮ್ಮದ್ ಯು.ಬಿ. ಗೌರವಿಸಿದರು.

ಟಿಆರ್‌ಎಫ್ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ಸಂಚಾರ ಪೊಲೀಸ್ ಮುಖ್ಯ ವಾರ್ಡನ್ ಜೋಯಿ ಗೊನ್ಸಾಲ್ವಿಸ್, ಪ್ಲಾಮ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುರ್ರಝಾಕ್, ಉದ್ಯಮಿ ಎಸ್.ಎಫ್. ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು. ಅಬ್ದುಸ್ಸಲಾಂ ಮುಸ್ಲಿಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News