ಮಾಳ ಬಸ್ ಅಪಘಾತ: ಏಳು ಮೃತದೇಹ ಕುಟುಂಬಗಳಿಗೆ ಹಸ್ತಾಂತರ

Update: 2020-02-16 17:04 GMT

ಕಾರ್ಕಳ, ಫೆ.16: ಮಾಳ ಮುಳ್ಳೂರು ಘಾಟಿಯಲ್ಲಿ ಫೆ.15ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಒಂಭತ್ತು ಮಂದಿಯ ಪೈಕಿ ಏಳು ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಇಂದು ಬೆಳಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ, ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 

ಮೃತಪಟ್ಟ ಮೈಸೂರು ಚಾಮುಂಡಿಬೆಟ್ಟದ ಯೊಗೀಂದ್ರ ಆರ್.(24), ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿಯ ವಿನುತಾ ವಿ.(28), ಮೈಸೂರು ಬೋಗದಿಯ ರಕ್ಷೀತಾ(27), ಮೈಸೂರು ಜೆಎಸ್‌ಎಸ್ ಲೇಔಟ್‌ನ ಅನುಜ್ನಾ (26), ಮೈಸೂರು ನಂಜನಗೂಡು ಅಂಬ್ಲೆ ಗ್ರಾಮದ ಬಸವರಾಜ್(24) ಮತ್ತು ಮಹೇಶ್(38), ಕೊಳ್ಳೆಗಾಲದ ಪ್ರೀತಮ್(24) ಎಂಬವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕಾರ್ಕಳಕ್ಕೆ ಆಗಮಿಸಿದ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಅದೇ ರೀತಿ ಮೃತಪಟ್ಟ ಬಸ್ ಚಾಲಕ ತುಮಕೂರಿನ ರಾಧಾರವಿ(35) ಹಾಗೂ ಕ್ಲೀನರ್ ತುಮಕೂರಿನ ಮಾರುತಿ ಕುಟುಂಬದವರು ಇನ್ನಷ್ಟೆ ಕಾರ್ಕಳಕ್ಕೆ ಆಗಮಿಸಬೇಕಾಗಿದೆ. ಬಳಿಕ ಇವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಗಾಯಗೊಂಡವರ ಪೈಕಿ ಯಮುನಾ ಮತ್ತು ಕಾವ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರ ವಿವರ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊಳ್ಳೆಗಾಲದ ಯಮುನಾ(22) ಗಂಭೀರ ಸ್ಥಿತಿಯಲ್ಲಿ, ಅದೇ ರೀತಿ ಲಕ್ಷ್ಮೀ(22), ನರಸೀಪುರದಪ್ರದೀಪ(26), ನಂಜನಗೂಡಿನ ಸುನೀಲ್(27), ಕಾವ್ಯ ಆರ್.(22), ಮೈಸೂರಿನ ಕಾವ್ಯ ಜಿ.ಎನ್. (19), ಕೊಡಗು ಕುಶಲನಗರದ ಕಾವ್ಯ ಎಂ.ವಿ.(24), ರಘುವೀರ್(30), ಮೈಸೂರಿನ ಶರೋನ್ ಶಿರ್ಲಾಯ್ ಮರಿಯಾ(22), ಸತೀಶ್ ಸಿ.(32), ರಂಜಿತಾ ವಿ.ಜಿ.(26) ಎಂಬವರು ತುರ್ತುಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.

ಕಾರ್ಕಳ ಸಿಟಿ ನರ್ಸಿಂಗ್ ಹೋಮ್‌ನಲ್ಲಿ ನರಸಿಪುರದ ಮೇಘಶ್ರೀ(22), ಮೈಸೂರಿನ ಅರ್ಚನಾ(20), ದಿವ್ಯಾಶ್ರೀ(25), ವಿದ್ಯಾ(25), ಸುಷ್ಮಾ(24), ಪೂರ್ಣಿಮಾ (25), ಹರ್ಷಿತಾ(25), ಮಂಜುಳಾ(25), ಅಂಬಿಕಾ(20), ನಂಜುಂಡ ಸ್ವಾಮೀ, ಚಾಮರಾಜಪಟ್ಟಣದ ದೀಪಿಕಾ, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮೈಸೂರಿನ ಮಾನಸ(24), ನರಸೀಪುರದ ಶ್ವೇತ(23), ಹುಂಚೂರಿನ ಸುಶ್ಮಾ ಕೆ.ಎಸ್.(23), ಮಂಡ್ಯದ ನಳಿನಿ(26), ಮುತ್ತುರಾಜ್ (25), ಹೆಚ್.ಡಿ.ಕೋಟೆಯ ಸುನೀಲ್ ಸಿ.(25), ನಂಜನಗೋಡಿನ ಜಗದೀಶ್(25) ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಪ್ರೀತಿಶ್ರೀ ಆರ್.(21) ಎಂಬವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News