ಸಿಎ ವಿದ್ಯಾರ್ಥಿಗಳ ಸಮ್ಮೇಳನ ‘ಅಚಿಂತ್ಯ’ ಉದ್ಘಾಟನೆ

Update: 2020-02-16 13:39 GMT

ಉಡುಪಿ, ಫೆ.16: ಸಿಎ ವಿಧ್ಯಾರ್ಥಿಗಳು ಕಲಿಯುವುದರ ಜೊತೆಗೆ ಪರೀಕ್ಷೆ ಗಳನ್ನು ಎದುರಿಸುವಲ್ಲಿ ಹಲವಾರು ಒತ್ತಡಗಳನ್ನು ಎದುರಿಸುತ್ತಾರೆ. ಸರಿಯಾದ ಮನಸ್ಥಿತಿಯ ನಿಯಂತ್ರಣದಿಂದ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯ ವಾಗುತ್ತದೆ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಐಸಿಎಐನ ಎಸ್‌ಐಆರ್‌ಸಿ ಉಡುಪಿ ಶಾಖೆ ಮತ್ತು ಉಡುಪಿ ಸಿಕಾಸಾ ಸಹಯೋಗದೊಂದಿಗೆ ಇತ್ತೀಚೆಗೆ ಉಡುಪಿಯ ಕಿದಿಯೂರ್ ಹೊಟೇಲಿನ ಮಾಧವ ಕೃಷ್ಣ ಹಾಲಿನಲ್ಲಿ ಆಯೋಜಿಸಲಾದ 17ನೆ ಸಿಎ ವಿದ್ಯಾರ್ಥಿಗಳ ಸಮ್ಮೇಳನ ಅಚಿಂತ್ಯ- 2020ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷ ಸಿಎ ನರಸಿಂಹ ನಾಯಕ್ ವಹಿಸಿದ್ದರು. ಶಾಖೆಯ ಉಪಾಧ್ಯಕ್ಷ ಸಿಎ ಪ್ರದೀಪ್ ಜೋಗಿ, ಕಾರ್ಯದರ್ಶಿ ಸಿಎ ಕವಿತ ಪೈ, ಖಜಾಂಚಿ ಸಿಎ ಲೋಕೇಶ್ ಶೆಟ್ಟಿ, ಸಿಕಾಸಾ ಉಪಾಧ್ಯಕ್ಷ ನಿಖಿಲ್ ನಾಗರಾಜ್ ಉಪಸ್ಥಿತರಿದ್ದರು.

ಹೊಸದಾಗಿ ಅರ್ಹತೆ ಪಡೆದ ಸಿಎಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು. ಸಿಕಾಸಾ ಅಧ್ಯಕ್ಷ ಸಿಎ ಗುಜ್ಜಾಡಿ ಪ್ರಭಾಕರ ಎನ್.ನಾಯಕ್ ಸ್ವಾಗತಿಸಿದರು. ಸಿಕಾಸಾ ಸದಸ್ಯೆ ನವ್ಯಾ ಅಶೋಕ್ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯದರ್ಶಿ ಸಜನಿ ಜೆ.ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News