ಅಂಬ್ಲಮೊಗರು: ನುಸ್ರತುಲ್ ಇಸ್ಲಾಮ್ ಸಮಿತಿಯಿಂದ ಎರಡು ಜೋಡಿ ವಿವಾಹ-ರಕ್ತದಾನ ಶಿಬಿರ

Update: 2020-02-16 14:58 GMT

ಮಂಗಳೂರು, ಫೆ.16: ಅಂಬ್ಲಮೊಗರು ಗ್ರಾಮದ ಕುಂಡೂರು ನುಸ್ರತುಲ್ ಇಸ್ಲಾಮ್ ಸಮಿತಿಯ 41ನೇ ವಾರ್ಷಿಕೋತ್ಸವ ಪ್ರಯುಕ್ತ ಕುಂಡೂರು ಜುಮ್ಮಾ ಮಸೀದಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಎರಡು ಜೋಡಿಯ ಉಚಿತ ವಿವಾಹ ಮತ್ತು ರಕ್ತದಾನ ಶಿಬಿರವು ರವಿವಾರ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬ್ಲಮೊಗರು ಕೇಂದ್ರ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಷದಿ ಇಸ್ಲಾಮಿನಲ್ಲಿ ಮದುವೆಯು ಅತ್ಯಂತ ಪವಿತ್ರ ಕಾರ್ಯವಾಗಿದೆ. ಓರ್ವ ವ್ಯಕ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಆತನ ಜೀವನ ಪರಿಪೂರ್ಣಗೊಂಡಂತೆ ಎಂದರು.

ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೆರವೇರಿಸಿದರು. ಸೈಯದ್ ಶರಫುದ್ದೀನ್ ತಂಙಳ್ ಫರೀದ್ ನಗರ, ಶಾಸಕ ಯು.ಟಿ.ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕುಂಡೂರು ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸ್ವಾಗತ್, ಮಾಜಿ ಅಧ್ಯಕ್ಷರಾದ ಎಂ.ಕೆ.ಮುಹಮ್ಮದ್, ಡಾ.ಸುಲೈಮಾನ್, ಎಚ್.ಶಾಲಿಹ್ ಹರೇಕಳ, ಝುಬೈರ್ ದೋಟ, ಶರೀಫ್ ಕುಂಡೂರು, ಕುಂಡೂರು ಜುಮಾ ಮಸೀದಿಯ ಮಾಜಿ ಖತೀಬರಾದ ಅಬೂಸಾಲಿ ಫೈಝಿ ಅಕ್ಕರಂಗಡಿ, ರಶೀದ್ ಯಮಾನಿ ಕಡಬ, ನುಸ್ರತುಲ್ ಇಸ್ಲಾಂ ಸಮಿತಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಎಲ್ಯಾರ್, ಮುಹಮ್ಮದ್ ಮೋನು, ಮುಹಮ್ಮದ್ ದೋಟ, ಅಬೂಬಕ್ಕರ್ ಬೀಡಿ, ಎಲ್ಯಾರ್ ಜುಮಾ ಮಸೀದಿಯ ಖತೀಬ್ ಮುಸ್ತಫಾ ಫೈಝಿ, ಮಜಲ್ ತೋಟ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಅನ್ಸಾರಿ, ಎಲ್ಯಾರ್ ಪದವು ಮಸೀದಿಯ ಖತೀಬ್ ಮುಹಮ್ಮದ್ ಮದನಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬೂಸಾಲಿಹ್, ಎಲ್ಯಾರ್ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಭಂಡಾರಪಾದೆ, ಗ್ರಾಪಂ ಸದಸ್ಯರಾದ ಇಕ್ಬಾಲ್ ಎಸ್.ಎಂ., ಇಸ್ಹಾಕ್ ಬೊಟ್ಟು ಉಪಸ್ಥಿತರಿದ್ದರು.

ನುಸ್ರತುಲ್ ಇಸ್ಲಾಂ ಸಮಿತಿಯ ಕಾರ್ಯದರ್ಶಿ ಸಲೀಂ ಅಲಿ ಸ್ವಾಗತಿಸಿದರು. ಅಧ್ಯಕ್ಷ ಮುಹಮ್ಮದ್ ರಫೀಕ್ ಅಂಬ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News