ಜಮ್ಮು ಕಾಶ್ಮೀರದವರಿಗೆ ರೂಮ್ ನೀಡುವುದಿಲ್ಲ ಎಂದ 'ಓಯೊ': ಕಾಶ್ಮೀರದ ವಿದ್ಯಾರ್ಥಿಯ ಆರೋಪ

Update: 2020-02-16 16:59 GMT

ಹೊಸದಿಲ್ಲಿ: ತಾನು ಕಾಶ್ಮೀರಿ ಎಂಬ ಕಾರಣಕ್ಕೆ ಉತ್ತರ ದಿಲ್ಲಿಯಲ್ಲಿ ಓಯೊ ರೂಮ್ ನೀಡದಂತೆ ತಡೆಯಲಾಗಿದೆ ಎಂದು ಕಾಶ್ಮೀರದ ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಾರೆ.

ದಿಲ್ಲಿ ವಿವಿ ವಿದ್ಯಾರ್ಥಿಯಾಗಿರುವ ನೌಮಾನ್ ರಫೀಕ್, ಇಲ್ಲಿ ಆಶಾ ರೆಸಿಡೆನ್ಸಿಯಲ್ಲಿ ತನ್ನ ತಂದೆ ಮತ್ತು ಸಹೋದರಿ ತಂಗಲು ಓಯೊ ರೂಮ್ ಬುಕ್ ಮಾಡಿದ್ದರು. ಶನಿವಾರ ಈ ಬಗ್ಗೆ ನೌಮಾನ್ ವಿಚಾರಿಸಲು ಹೋಗಿದ್ದು, ಹೊಟೇಲ್ ಸಿಬ್ಬಂದಿ ಐಡಿ ಕಾರ್ಡ್ ಕೇಳಿದ್ದರು. ವೋಟರ್ ಐಡಿಯಲ್ಲಿ ಜಮ್ಮು ಕಾಶ್ಮೀರದ ವಿಳಾಸ ಇರುವುದನ್ನು ನೋಡಿ ಹೊಟೇಲ್ ಸಿಬ್ಬಂದಿ ರೂಮ್ ನಿರಾಕರಿಸಿದ್ದಾರೆ ಎಂದು ನೌಮಾನ್ ಆರೋಪಿಸಿದ್ದಾರೆ.

"ನಮ್ಮ ಹೊಟೇಲ್ ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಜಮ್ಮು ಕಾಶ್ಮೀರದವರಿಗೆ ತಂಗಲು ಅವಕಾಶವಿಲ್ಲ" ಎಂದು ಹೊಟೇಲ್ ನವರು ಹೇಳಿದರು ಎಂದು ನೌಮಾನ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News