ಪರ್ಯಾಯ ಅದಮಾರು ಮಠಕ್ಕೆ ಹೊರೆಕಾಣಿಕೆ ಅರ್ಪಣೆ

Update: 2020-02-16 17:14 GMT

ಉಡುಪಿ, ಫೆ.16: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠಕ್ಕೆ ಕಟೀಲು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಇಂದು ಹೊರೆಕಾಣಿಕೆ ಸಮರ್ಪಿಸಿದರು.

ವಾಸುದೇವ ಆಸ್ರಣ್ಣ, ವೆಂಕಟಕೃಷ್ಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಕಡಂದಲೆ ಸ್ಕಂದ ಭಟ್, ಅಗರಿ ರಾಘವೇಂದ್ರ ರಾವ್ ನೇತೃತ್ವದಲ್ಲಿ ನಗರದ ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ಹೊರೆಕಾಣಿಕೆ ತಂದು ಮಠಕ್ಕೆ ಅರ್ಪಿಸಲಾಯಿತು.
ಬೆಲ್ಲ 9000 ಕೆ.ಜಿ., ಬೆಳ್ತಿಗೆ ಅಕ್ಕಿ 11000 ಕೆ.ಜಿ., ಸಕ್ಕರೆ 500 ಕೆ.ಜಿ, ಅವಲಕ್ಕಿ 1260 ಕೆ.ಜಿ., ಅರಳು 120 ಕೆ.ಜಿ., ಎಳ್ಳೆಣ್ಣೆ 200 ಕೆ.ಜಿ., ತೊಗರಿಬೇಳೆ 50 ಕೆ.ಜಿ., ತೆಂಗಿನೆಣ್ಣೆ - 15 ಕೆ.ಜಿ. ಮತ್ತು 150 ತೆಂಗಿನಕಾಯಿಯನ್ನು ಹೊರೆ ಕಾಣಿಕೆ ನೀಡಿದ ಭಕ್ತಾಧಿಗಳಿಗೆ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಶ್ರೀಕೃಷ್ಣ ಸೇವಾ ಬಗದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News