ಪ್ರಿಯಾಂಕಾ ಗಾಂಧಿಯನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ

Update: 2020-02-17 05:42 GMT

ಹೊಸದಿಲ್ಲಿ, ಫೆ.17: ಕಾಂಗ್ರೆಸ್ ದಿಲ್ಲಿ ವಿಧಾನ ಸಭಾ  ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಬಳಿಕ ಕಾಂಗ್ರೆಸ್ ಆತ್ಮಾವಲೋಕನ ಮತ್ತು "ತುರ್ತು ಕ್ರಮ" ಕ್ಕೆ ಮುಂದಾಗಿದೆ. ಪಕ್ಷದ ಸಂಘಟನೆಯ ಪುನರ್ರಚನೆ. ಇನ್ನೊಂದು ರಾಜ್ಯಸಭೆಗೆ ಕಳುಹಿಸುವ ಮುಂದಿನ ಬ್ಯಾಚ್ ನಾಯಕರ ಶೋಧ ನಡೆಸಲಿದೆ.

ಅಂಬಿಕಾ ಸೋನಿ, ಗುಲಾಮ್ ನಬಿ ಆಝಾದ್ ಮತ್ತು ದಿಗ್ವಿಜಯ ಸಿಂಗ್ ಸೇರಿದಂತೆ  ಮತ್ತಿತರ ಹಿರಿಯ ನಾಯಕರ ರಾಜ್ಯಸಭೆಯ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಛತ್ತೀಸ್ ಗಡ, ರಾಜಸ್ಥಾನ ಮತ್ತು ಝಾರ್ಖಂಡ್‌ ಕೋಟಾದಿಂದ ಈ ಖಾಲಿ ಹುದ್ದೆಗಳನ್ನು ಕಾಂಗ್ರೆಸ್ ಭರ್ತಿ ಮಾಡಲಿದೆ.

ಪಕ್ಷವು ಮತ್ತೆ ಹಿರಿಯರಿಗೆ ಮಣೆ ಹಾಕುತ್ತದೋ ? ಅಥವಾ ಹೊಸ ಮುಖಗಳಿಗೆ ಅದರಲ್ಲೂ ಯುವ ನಾಯಕರಿಗೆ ಅವಕಾಶ ನೀಡುತ್ತದೋ ಎಂಬುದು ಒಂದು ಪ್ರಶ್ನೆಯಾದರೆ, ಪ್ರಿಯಾಂಕಾ ಗಾಂಧಿ  ಅವರನ್ನು ಮೇಲ್ಮನೆಗೆ ಕರೆತರುವ ಸಾಧ್ಯತೆಯ ಬಗ್ಗೆ ಉಹಾಪೋಹಗಳು ತೀವ್ರವಾಗಿವೆ. ಛತ್ತೀಸ್ ಗಡ ದ ನಾಯಕರು ಹಿರಿಯರ ಮನೆಗೆ ಪ್ರಿಯಾಂಕಾ ಗಾಂಧಿ ಪ್ರವೇಶವನ್ನು ಬೆಂಬಲಿಸಲು ಪ್ರಸ್ತಾವನೆಯನ್ನು ಕಾಂಗ್ರೆಸ್ ನ ಹೈಕಮಾಂಡ್  ನ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯಲ್ಲಿ ಪ್ರಿಯಾಂಕಾ  ಗಾಂಧಿ ಆಡಳಿತಾರೂಢ ಬಿಜೆಪಿ ವಿರುದ್ಧ ಪಕ್ಷದ ಪರ ಧ್ವನಿ ಎತ್ತುವುದು ಇದರ ಉದ್ದೇಶವಾಗಿದೆ. ಆದರೆ ಇದರಿಂದ ವಂಶಾಡಳಿತದ ರಾಜಕಾರಣದ ಆರೋಪಗಳಿಗೆ ಕಾಂಗ್ರೆಸ್ ಮತ್ತೆ ತೆರೆದುಕೊಳ್ಳುವ ಸಂಭವಿದೆ.

ಆದರೆ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳಹಿಸುವ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಿರಿಯ ನಾಯಕರಲ್ಲಿ ವಿಪಕ್ಷ ನಾಯಕ ಗುಲಾಮ್ ನಬಿ ಆಝಾದ್ ಅವರನ್ನು ಮತ್ತೆ ಲೋಕಸಭೆಗೆ ನಾಮನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News